×
Ad

ಶಿವಮೊಗ್ಗ: ಕಡವೆ ಬೇಟೆ; ನಾಲ್ವರ ಬಂಧನ

Update: 2024-09-02 11:39 IST

ಶಿವಮೊಗ್ಗ: ಕಡವೆಯನ್ನು ಬೇಟೆಯಾಡಿದ ಅರೋಪದಲ್ಲಿ  ನಾಲ್ವರನ್ನು ಭದ್ರಾವತಿ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿರುವ ಘಟನೆ ನಡೆದಿದೆ.

ಭದ್ರಾವತಿ ತಾಲೂಕಿನ ಗೋಂದಿ ಗ್ರಾಮದ ನಿವಾಸಿ ಶಿವ ಬಿನ್ ರಾಜಪ್ಪ(28), ವೆಂಕಟೇಶ ಬಿನ್ ಮುನಿಯಪ್ಪ (60), ಚಿಕ್ಕಮಗಳೂರು ಚೌಡಿಕಟ್ಟೆ ಭೈರಾಪುರ ಗ್ರಾಮ ವಾಸಿಗಳಾದ ಮಂಜಪ್ಪ ಬಿನ್ ನಾಗಪ್ಪ (45), ವಿನೋದ ಬಿನ್ ಮಂಜಪ್ಪ (19) ಬಂಧಿತ ಆರೋಪಿಗಳು.

ಭದ್ರಾವತಿ ತಾಲೂಕು ಉಂಬ್ಳೆಬೈಲು ರೇಂಜ್‌ನ ಚೌಡಿಕಟ್ಟೆಯ ಬಳಿ ಕಡವೆಯನ್ನು ಬೇಟೆಯಾಡಿ ಮಾಂಸ ಮಾಡಿದ ಆರೋಪಿಗಳು, ಅದರ ತಲೆಯನ್ನು ಕೆರೆಗೆ ಎಸೆದು ಹೋಗಿದ್ದರು ಎನ್ನಲಾಗಿದೆ. ಈ ಪ್ರಕರಣವನ್ನು ಭೇದಿಸಿದ ಭದ್ರಾವತಿ ಅರಣ್ಯ ಇಲಾಖೆ ಸಿಬ್ಬಂದಿ ಈ ನಾಲ್ವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಭದ್ರಾವತಿ ಡಿಸಿಎಫ್ ಆಶೀಶ್ ರೆಡ್ಡಿ,ಚನ್ನಗಿರಿ ಎಸಿಎಫ್ ರತ್ನಪ್ರಭ ಮಾರ್ಗದರ್ಶನದಲ್ಲಿ ಉಂಬ್ಳೇಬೈಲು ಆರ್ ಎಫ್ ಓ ಗಿಡ್ಡಸ್ವಾಮಿ, ಡಿಆರ್ ಎಫ್ ಓ ಪವನ್, ಬೀಟ್ ಫಾರೆಸ್ಟ್ ಸಂಜು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News