DRDO DIBT ನೇಮಕಾತಿ; ಯಾರು ಅರ್ಜಿ ಸಲ್ಲಿಸಬಹುದು?
ಜೀವರಸಾಯನಶಾಸ್ತ್ರ, ಜೈವಿಕ ತಂತ್ರಜ್ಞಾನ, ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ, ಜೀವ ವಿಜ್ಞಾನ, ಪಾಲಿಮರ್ ವಿಜ್ಞಾನ ಓದಿದವರಿಗೆ ಡಿಫೆನ್ಸ್ ಇನ್ಸ್ಟಿಟ್ಯೂಟ್ ಆಫ್ ಬಯೋಡಿಫೆನ್ಸ್ ಟೆಕ್ನಾಲಜೀಸ್ ಕಡೆಯಿಂದ 2026ನೇ ಸಾಲಿನ ಅಪ್ರೆಂಟಿಸ್ ಹುದ್ದೆಗಳಿಗೆ ಅಧಿಸೂಚನೆ ನೀಡಲಾಗಿದೆ.
ಮೈಸೂರಿನ ಡಿಫೆನ್ಸ್ ಇನ್ಸ್ಟಿಟ್ಯೂಟ್ ಆಫ್ ಬಯೋ-ಡಿಫೆನ್ಸ್ ಟೆಕ್ನಾಲಜೀಸ್‌ನಲ್ಲಿ (DRDO DIBT) ಕಡೆಯಿಂದ 2026ನೇ ಸಾಲಿನ ಅಪ್ರೆಂಟಿಸ್ ಹುದ್ದೆಗಳಿಗೆ ಅಧಿಸೂಚನೆ ನೀಡಲಾಗಿದೆ. ಮೈಸೂರಿನಲ್ಲಿ ಖಾಲಿ ಇರುವ 6 ಗ್ರಾಜುಯೇಟ್ ಅಪ್ರೆಂಟಿಸ್ (Graduate Apprentice) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಜೊತೆಗೆ ಡಿಫೆನ್ಸ್ ರೀಸರ್ಚ್ ಮತ್ತು ಡೆವಲಪ್ಮೆಂಟ್ ಆರ್ಗನೈಸೇಶನ್ ಕಡೆಯಿಂದ DIBTನಲ್ಲಿ ರಿಸರ್ಚ್ ಅಸೋಸಿಯೇಟ್ (RA) ಮತ್ತು ಜೂನಿಯರ್ ರಿಸರ್ಚ್ ಫೆಲೋ (JRF) ಹುದ್ದೆಗಳಿಗೂ ಅರ್ಜಿ ಆಹ್ವಾನಿಸಲಾಗಿದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 21 ಆಗಸ್ಟ್ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಸೆಪ್ಟೆಂಬರ್ 2026
ಹುದ್ದೆಯ ವಿವರಗಳು
• ನೇಮಕಾತಿ ಸಂಸ್ಥೆ: DRDO – ಡಿಫೆನ್ಸ್ ಇನ್ಸ್ಟಿಟ್ಯೂಟ್ ಆಫ್ ಬಯೋಡಿಫೆನ್ಸ್ ಟೆಕ್ನಾಲಜೀಸ್
• ಹುದ್ದೆಯ ಹೆಸರು: ಗ್ರಾಜುಯೇಟ್ ಅಪ್ರೆಂಟಿಸ್ (Graduate Apprentice - 06 ಹುದ್ದೆಗಳು) ಹಾಗೂ ರಿಸರ್ಚ್ ಅಸೋಸಿಯೇಟ್ (RA- 1 ಹುದ್ದೆ) ಮತ್ತು ಜೂನಿಯರ್ ರಿಸರ್ಚ್ ಫೆಲೋ (JRF- 4 ಹುದ್ದೆ) ಹುದ್ದೆಗಳು.
• ಒಟ್ಟು ಹುದ್ದೆಗಳ ಸಂಖ್ಯೆ: 11
• ಉದ್ಯೋಗ ಸ್ಥಳ: ಮೈಸೂರು, ಕರ್ನಾಟಕ
• ವೇತನ ತಿಂಗಳಿಗೆ: 12,300 ರೂ.
ಲಭ್ಯವಿರುವ ಹುದ್ದೆಗಳು
1. ಸಂಶೋಧನಾ ಸಹವರ್ತಿ (RA)
ಅರ್ಹತೆ: ಆಹಾರ ಸಂಸ್ಕರಣೆ/ಎಂಜಿನಿಯರಿಂಗ್/ತಂತ್ರಜ್ಞಾನದಲ್ಲಿ ಪಿಎಚ್‌ಡಿ.
ಅಪೇಕ್ಷಣೀಯ: AI/ML/ಸಿಮ್ಯುಲೇಶನ್ ಪರಿಕರಗಳಲ್ಲಿ ಅನುಭವ.
ಹುದ್ದೆಗಳು: 1.
ಸ್ಟೈಫಂಡ್: 67,000 ರೂ. + HRA.
ವಯೋಮಿತಿ: 35 ವರ್ಷಗಳು (SC/ST/OBC ಗೆ ಸಡಿಲಿಕೆ).
ಅವಧಿ: 2 ವರ್ಷಗಳು.
2. ಜೂನಿಯರ್ ರಿಸರ್ಚ್ ಫೆಲೋಶಿಪ್‌ಗಳು (JRF)
ಅರ್ಹತೆ: NET/GATE ಜೊತೆಗೆ MSc (ಆಹಾರ ವಿಜ್ಞಾನ/ತಂತ್ರಜ್ಞಾನ).
ಪಾಲಿಮರ್ ವಿಜ್ಞಾನ/ತಂತ್ರಜ್ಞಾನ/ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್.
ಹುದ್ದೆಗಳು: 4
ಸ್ಟೈಫಂಡ್: 37,000 ರೂ. + HRA.
ವಯೋಮಿತಿ: 28 ವರ್ಷಗಳು (SC/ST/OBC ಗೆ ಸಡಿಲಿಕೆ).
ಅವಧಿ: 2 ವರ್ಷಗಳು, ಕಾರ್ಯಕ್ಷಮತೆಯ ಆಧಾರದ ಮೇಲೆ 4 ವರ್ಷಗಳವರೆಗೆ ವಿಸ್ತರಿಸಬಹುದು.
3. ಗ್ರಾಜುವೇಟ್ ಅಪ್ರೆಂಟಿಸ್
ತರಬೇತಿ ಅವಧಿ: 12 ತಿಂಗಳುಗಳು
ಸ್ಟೈಫಂಡ್: ತಿಂಗಳಿಗೆ 12,300 ರೂ.
ಖಾಲಿ ಹುದ್ದೆಗಳು:
ಸೂಕ್ಷ್ಮ ಜೀವವಿಜ್ಞಾನ - 6 ಸೀಟುಗಳು
ಇತರ ಕ್ಷೇತ್ರಗಳು: ಜೀವರಸಾಯನಶಾಸ್ತ್ರ, ಜೈವಿಕ ತಂತ್ರಜ್ಞಾನ, ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ, ಜೀವ ವಿಜ್ಞಾನ, ಪಾಲಿಮರ್ ವಿಜ್ಞಾನ (ಸಂಖ್ಯೆಗಳನ್ನು ನಿರ್ದಿಷ್ಟಪಡಿಸಲಾಗಿಲ್ಲ)
ಅರ್ಹತೆ
• ಮಾನ್ಯತೆ ಪಡೆದ ಭಾರತೀಯ ವಿಶ್ವವಿದ್ಯಾಲಯಗಳು/ಸಂಸ್ಥೆಗಳಿಂದ ಪೂರ್ಣ ಸಮಯದ ಬಿ.ಎಸ್ಸಿ. ಅಥವಾ ಬಿ.ಇ/ಬಿ.ಟೆಕ್ (ಮೊದಲ ವಿಭಾಗ).
• ಪದವಿ ವರ್ಷಗಳು ಅರ್ಹತೆ: 2022–2026.
• ನಿಯಮಿತ ಅಭ್ಯರ್ಥಿಗಳು ಮಾತ್ರ (ದೂರ/ಮುಕ್ತ ಕಲಿಕೆ ಅಲ್ಲ).
• http://nats.education.gov.in ನಲ್ಲಿ ನೋಂದಾಯಿಸಿಕೊಳ್ಳಬೇಕು.
ಆಯ್ಕೆ ವಿಧಾನ
• ಲಿಖಿತ ಪರೀಕ್ಷೆ (MCQ ಗಳು) + ಸಂದರ್ಶನ. ಮೆರಿಟ್ ಆಧಾರಿತ ಪ್ಯಾನೆಲ್ 1 ವರ್ಷಕ್ಕೆ ಮಾನ್ಯವಾಗಿರುತ್ತದೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ
• ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
• ಮೊದಲಿಗೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಮೊದಲು DRDO ನ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ನೇರವಾಗಿ ‘Careers / Apprenticeship’ ವಿಭಾಗಕ್ಕೆ ಹೋಗಿ. ಅಥವಾ ಈ ಮುಂದಿನ ಲಿಂಕ್ ಬಳಸಿ ಅರ್ಜಿ ಫಾರಂ ಡೌನ್ಲೋಡ್ ಮಾಡಬಹುದು: https://drdo.gov.in/drdo/en/offerings/vacancies/dibt-mysuru-invites-applications-award-research-associate-ra-junior-research
• ಅಧಿಸೂಚನೆ ಡೌನ್‌ಲೋಡ್ ಮಾಡಿ. ಅಲ್ಲಿ ನೀಡಿರುವ DRDO DIBT Graduate Apprentice Notification 2026 ಅನ್ನು ಓಪನ್ ಮಾಡಿ, ಅರ್ಜಿ ನಮೂನೆಯನ್ನು (Application Form) ಡೌನ್‌ಲೋಡ್ ಮಾಡಿಕೊಳ್ಳಿ.
• ಅರ್ಜಿ ಕಳುಹಿಸುವುದು (ಆಫ್‌ಲೈನ್ ಆಗಿದ್ದರೆ). ಭರ್ತಿ ಮಾಡಿದ ಅರ್ಜಿಯೊಂದಿಗೆ ನಿಮ್ಮ ಎಲ್ಲಾ ಶೈಕ್ಷಣಿಕ ಪ್ರಮಾಣಪತ್ರಗಳ ಜೆರಾಕ್ಸ್ ಪ್ರಪಿಗಳನ್ನು (ಅಟೆಸ್ಟ್ ಮಾಡಿಸಿ) ಅಧಿಸೂಚನೆಯಲ್ಲಿ ನಮೂದಿಸಿರುವ ವಿಳಾಸಕ್ಕೆ ಅಥವಾ ನಿರ್ದಿಷ್ಟ ಇಮೇಲ್ ವಿಳಾಸಕ್ಕೆ 2026 ಸೆಪ್ಟೆಂಬರ್ 15 ರೊಳಗೆ ತಲುಪುವಂತೆ ಕಳುಹಿಸಿ. ವಿಳಾಸ: ಕೇಂದ್ರ ಮುಖ್ಯಸ್ಥರು, DIBT, DRDO, ಮೈಸೂರು - 570011.
• ದಾಖಲೆಗಳು: ಮೂಲ ಪ್ರಮಾಣಪತ್ರಗಳು, ಪ್ರಶಂಸಾಪತ್ರಗಳು, ಸಂದರ್ಶನದಲ್ಲಿ ಭಾಗವಹಿಸಲು ಮಾನ್ಯ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ನೀಡಿ.
• ಸರ್ಕಾರಿ/ಪಿಎಸ್‌ಯು ಉದ್ಯೋಗಿಗಳು NOC ಯೊಂದಿಗೆ ಸರಿಯಾದ ಮಾರ್ಗದ ಮೂಲಕ ಅರ್ಜಿ ಸಲ್ಲಿಸಬೇಕು.
• ಗ್ರಾಜುವೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಈ ಮುಂದಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಬೇಕು: https://nats.education.gov.in/
• ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾತ್ರ ಇಮೇಲ್ ಮೂಲಕ ತಿಳಿಸಲಾಗುತ್ತದೆ.