ESIC ಕರ್ನಾಟಕ ನೇಮಕಾತಿ; ಯಾರು ಅರ್ಜಿ ಸಲ್ಲಿಸಬಹುದು?
Photo Credit : esic.in
12 ನವೆಂಬರ್ 2026ರಂದು ನೇರ ಸಂದರ್ಶನದ ಮೂಲಕ ಆಯ್ಕೆ ನಡೆಯಲಿದ್ದು, ಆಸಕ್ತರು ತಕ್ಷಣವೇ ಅಗತ್ಯ ಸಿದ್ಧತೆ ಮಾಡಿಕೊಳ್ಳಬಹುದು.
ನೌಕರರ ರಾಜ್ಯ ವಿಮಾ ನಿಗಮ (ESIC) ಕರ್ನಾಟಕವು ಬೆಂಗಳೂರಿನ ಪೀಣ್ಯದಲ್ಲಿರುವ ತನ್ನ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರು (Senior Resident) ಹಾಗೂ ತಜ್ಞ (Specialist) ಹುದ್ದೆಗಳ ಭರ್ತಿಗೆ ಅಧಿಕೃತ ಚಾಲನೆ ನೀಡಿದೆ. ವಿಶೇಷವೆಂದರೆ, ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ನೇರ ಸಂದರ್ಶನದ ಮೂಲಕ ಆಯ್ಕೆ ನಡೆಯಲಿದ್ದು, ಆಸಕ್ತರು ತಕ್ಷಣವೇ ಅಗತ್ಯ ಸಿದ್ಧತೆ ಮಾಡಿಕೊಳ್ಳಬಹುದು.
►ಪ್ರಮುಖ ವಿವರಗಳು
• ಸಂಸ್ಥೆಯ ಹೆಸರು: ನೌಕರರ ರಾಜ್ಯ ವಿಮಾ ನಿಗಮ, ಕರ್ನಾಟಕ
• ಒಟ್ಟು ಹುದ್ದೆಗಳು: 14
• ಉದ್ಯೋಗ ಸ್ಥಳ: ಪೀಣ್ಯ, ಬೆಂಗಳೂರು, ಕರ್ನಾಟಕ
• ಆಯ್ಕೆ ಪ್ರಕ್ರಿಯೆ: ನೇರ ಸಂದರ್ಶನ
►ಹುದ್ದೆವಾರು ವಿವರಗಳು ಮತ್ತು ವಯೋಮಿತಿ
• ಸೀನಿಯರ್ ರೆಸಿಡೆಂಟ್: 10 ಹುದ್ದೆಗಳು (ಗರಿಷ್ಠ ವಯೋಮಿತಿ: 45 ವರ್ಷ)
• ಪೂರ್ಣಕಾಲಿಕ/ಅರೆಕಾಲಿಕ ತಜ್ಞರು: 4 ಹುದ್ದೆಗಳು (ಗರಿಷ್ಠ ವಯೋಮಿತಿ: 69 ವರ್ಷ)
• ಸೂಚನೆ: ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
►ಶೈಕ್ಷಣಿಕ ಅರ್ಹತೆ ಏನು?
• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ MBBS, ಸ್ನಾತಕೋತ್ತರ ಪದವಿ (PG), ಡಿಪ್ಲೊಮಾ ಅಥವಾ DNB ಪೂರ್ಣಗೊಳಿಸಿರಬೇಕು.
• ಮಾಸಿಕ ವೇತನ: 60,000 ರೂ.ನಿಂದ 1,27,141 ರೂ.ವರೆಗೆ.
ಅರ್ಜಿ ಸಲ್ಲಿಸುವುದು ಅಥವಾ ಸಂದರ್ಶನಕ್ಕೆ ಹಾಜರಾಗುವುದು ಹೇಗೆ?
ಯಾವುದೇ ಆನ್ಲೈನ್ ಅರ್ಜಿಯ ಅಗತ್ಯವಿಲ್ಲ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲ ಮೂಲ ದಾಖಲೆಗಳು, ಪ್ರಮಾಣಪತ್ರಗಳು ಹಾಗೂ ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು.
►ಸಂದರ್ಶನ ನಡೆಯುವ ಸ್ಥಳ: ವೈದ್ಯಕೀಯ ಅಧೀಕ್ಷಕರ ಕಚೇರಿ, ESIC ಆಸ್ಪತ್ರೆ, ಪೀಣ್ಯ, ಬೆಂಗಳೂರು.
►ಸಂದರ್ಶನದ ದಿನಾಂಕ: 12 ನವೆಂಬರ್ 2026.