×
Ad

ಮೆಟ್ರಿಕ್ ಪೂರ್ವ ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ

Update: 2026-05-29 17:11 IST

Photo Credit : shp.karnataka.gov.in

ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಸ್ಟೆಲ್ಗಳಿಗೆ ಹೊಸದಾಗಿ ಸೇರಲು ಬಯಸುವ ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2026-27ನೇ ಶೈಕ್ಷಣಿಕ ಸಾಲಿಗೆ ಮೆಟ್ರಿಕ್ ಪೂರ್ವ (ಬಿಸಿಎಂ ಪ್ರಿ ಮೆಟ್ರಿಕ್ ಹಾಸ್ಟೆಲ್) ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅಧಿಕೃತ ಪ್ರಕಟಣೆ ಹೊರಡಿಸಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಹಾಸ್ಟೆಲ್ಗಳಿಗೆ ಹೊಸದಾಗಿ ಸೇರಲು ಬಯಸುವ ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

📌 ಪ್ರಮುಖ ದಿನಾಂಕಗಳು:

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2026 ಜೂನ್ 15.

📌 ಪ್ರಮುಖ ಲಿಂಕ್ಗಳು

ಆನ್ಲೈನ್ ಅರ್ಜಿ ಸಲ್ಲಿಕೆ ಲಿಂಕ್: https://shp.karnataka.gov.in/bcwd/

ಇಲಾಖೆಯ ಅಧಿಕೃತ ವೆಬ್ಸೈಟ್: https://bcwd.karnataka.gov.in

📌 ಯಾರು ಅರ್ಜಿ ಸಲ್ಲಿಸಬಹುದು?

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಈ ಉಚಿತ ಹಾಸ್ಟೆಲ್ ಸೌಲಭ್ಯಕ್ಕಾಗಿ ಪ್ರವರ್ಗ-1, 2ಎ, 2ಬಿ, 3ಎ, 3ಬಿ ಹಾಗೂ ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡದ (ಎಸ್ಟಿ) ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

📌 ಪೋಷಕರ ವಾರ್ಷಿಕ ಆದಾಯ ಮಿತಿ ಎಷ್ಟು?

ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯದ ಮಿತಿಯನ್ನು ವರ್ಗಗಳ ಆಧಾರದ ಮೇಲೆ ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:

• ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿ ವಿದ್ಯಾರ್ಥಿಗಳಿಗೆ: ವಾರ್ಷಿಕ ಆದಾಯ 1 ಲಕ್ಷ ರೂ.ಗಳ ಒಳಗಿರಬೇಕು.

• ಪ್ರವರ್ಗ-1, ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡದ (ಎಸ್ಟಿ) ವಿದ್ಯಾರ್ಥಿಗಳಿಗೆ: ವಾರ್ಷಿಕ ಆದಾಯ 2.50 ಲಕ್ಷ ರೂ.ಗಳ ಒಳಗಿರಬೇಕು.

📌 ಅಗತ್ಯ ದಾಖಲೆಗಳು

1. ವಿದ್ಯಾರ್ಥಿಯ ಆಧಾರ್ ಕಾರ್ಡ್: ಇದು ಅತ್ಯಂತ ಪ್ರಮುಖ ದಾಖಲೆಯಾಗಿದ್ದು, ಆನ್ಲೈನ್ ಅರ್ಜಿಗೆ ಕಡ್ಡಾಯವಾಗಿದೆ.

2. ಜಾತಿ ಮತ್ತು ಆದಾಯ ಪ್ರಮಾಣಪತ್ರ: ವಿದ್ಯಾರ್ಥಿ ಅಥವಾ ಪೋಷಕರ ಹೆಸರಿನಲ್ಲಿ ಚಾಲ್ತಿಯಲ್ಲಿರುವ ಪ್ರಮಾಣಪತ್ರ (ಅರ್ಜಿ ಸಲ್ಲಿಸುವಾಗ ಆರ್ಡಿ ನಂಬರ್ ನಮೂದಿಸಬೇಕು).

3. ಸ್ಯಾಟ್ಸ್ ನಂಬರ್ (ಸ್ಟೂಡೆಂಟ್ ಟ್ರ್ಯಾಕಿಂಗ್ ಸಿಸ್ಟಂ ಬಂಬರ್): ವಿದ್ಯಾರ್ಥಿಯು ಶಾಲೆಯಲ್ಲಿ ಓದುತ್ತಿರುವ ಬಗ್ಗೆ ರಾಜ್ಯ ಸರ್ಕಾರದ ಶಾಲಾ ದಾಖಲಾತಿ ಸಂಖ್ಯೆ (ಇದನ್ನು ಶಾಲೆಯಲ್ಲಿ ಕೇಳಿ ಪಡೆಯಬಹುದು).

4. ಹಿಂದಿನ ವರ್ಷದ ಅಂಕಪಟ್ಟಿ: ವಿದ್ಯಾರ್ಥಿಯು ಹಿಂದಿನ ತರಗತಿಯಲ್ಲಿ ತೇರ್ಗಡೆಯಾಗಿರುವ ಅಂಕಪಟ್ಟಿ ಅಥವಾ ಶಾಲಾ ವ್ಯಾಸಂಗ ಪ್ರಮಾಣಪತ್ರ (ಸ್ಟಡಿ ಸರ್ಟಿಫಿಕೇಟ್).

5. ಶಾಲಾ ಪ್ರವೇಶಾತಿ ರಶೀದಿ: ಪ್ರಸಕ್ತ (2026-27) ಶೈಕ್ಷಣಿಕ ಸಾಲಿಗೆ ಶಾಲೆಗೆ ದಾಖಲಾಗಿರುವ ಅಥವಾ ಶುಲ್ಕ ಪಾವತಿಸಿದ ರಶೀದಿ.

6. ಬ್ಯಾಂಕ್ ಪಾಸ್ಬುಕ್: ವಿದ್ಯಾರ್ಥಿಯ ಹೆಸರಿನಲ್ಲಿರುವ ಹಾಗೂ ಆಧಾರ್ಗೆ ಲಿಂಕ್ ಆಗಿರುವ (ಎನ್ಪಿಸಿಐ ಮ್ಯಾಪ್ ಆಗಿರುವ) ಬ್ಯಾಂಕ್ ಖಾತೆಯ ಮುಖಪುಟದ ಪ್ರತಿ.

7. ಪಾಸ್ಪೋರ್ಟ್ ಸೈಜ್ ಭಾವಚಿತ್ರ: ವಿದ್ಯಾರ್ಥಿಯ ಇತ್ತೀಚೆಗಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ.

8. ವಾಸಸ್ಥಳ ದೃಢೀಕರಣ ಪತ್ರ: (ಅಗತ್ಯವಿದ್ದರೆ ಮಾತ್ರ)

📌 ಅರ್ಜಿ ಸಲ್ಲಿಸುವ ವಿಧಾನ

ಅರ್ಹ ವಿದ್ಯಾರ್ಥಿಗಳು ಕಡ್ಡಾಯವಾಗಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ. ಅದಕ್ಕಾಗಿ ಇಲಾಖೆಯ ಅಧಿಕೃತ ಪೋರ್ಟಲ್ https://shp.karnataka.gov.in/bcwd ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

📌 ಹೆಚ್ಚಿನ ಮಾಹಿತಿ

ತಾಲೂಕುವಾರು ವಿದ್ಯಾರ್ಥಿ ನಿಲಯಗಳ ಪಟ್ಟಿ, ಪ್ರವೇಶಕ್ಕೆ ಇರಬೇಕಾದ ಇತರೆ ನಿಖರ ಅರ್ಹತೆಗಳು ಮತ್ತು ಸಲ್ಲಿಸಬೇಕಾದ ಅಗತ್ಯ ದಾಖಲೆಗಳ ವಿವರಗಳನ್ನು ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ವೀಕ್ಷಿಸಬಹುದು.

📌 ಸಹಾಯವಾಣಿ

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಯಾವುದೇ ತಾಂತ್ರಿಕ ತೊಂದರೆಗಳು ಎದುರಾದರೆ ಇಲಾಖೆಯ ಇಮೇಲ್ bcwdhelpline@gmail.com ಗೆ ಮೇಲ್ ಮಾಡಬಹುದು ಅಥವಾ ಸಹಾಯವಾಣಿ ಸಂಖ್ಯೆ 8050770004 ಗೆ ಕರೆ ಮಾಡಬಹುದು. ಜೊತೆಗೆ ಅಗತ್ಯ ದಾಖಲೆಗಳೊಂದಿಗೆ ತಮ್ಮ ಸಮೀಪದ ಜಿಲ್ಲಾ ಅಥವಾ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಕಚೇರಿ ಅಧಿಕಾರಿಗಳನ್ನು ಖುದ್ದಾಗಿ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News