ಗಡಿ ಭದ್ರತಾ ಪಡೆಗೆ 1,167 ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿ
ಸಾಂದರ್ಭಿಕ ಚಿತ್ರ | Photo Credit : PTI
ಗಡಿ ಭದ್ರತಾ ಪಡೆ (BSF) ಸೇರಿದಂತೆ ವಿವಿಧ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಸಬ್ ಇನ್‌ಸ್ಪೆಕ್ಟರ್ ಹುದ್ದೆಗೆ ಬಡ್ತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಒಟ್ಟು 1,167 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನವಾಗಿದೆ.
BSF ನವೆಂಬರ್ 2026ರಲ್ಲಿ ಹೊರಡಿಸಿರುವ ಅಧಿಕೃತ ಅಧಿಸೂಚನೆಯ ಪ್ರಕಾರ, BSF, CRPF, ITBP ಮತ್ತು SSBಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾನ್ಸ್‌ಟೇಬಲ್ (GD), ಕಾನ್ಸ್‌ಟೇಬಲ್ (Tradesmen), ಹೆಡ್ ಕಾನ್ಸ್‌ಟೇಬಲ್ (GD) ಹಾಗೂ ಸಹಾಯಕ ಸಬ್ ಇನ್‌ಸ್ಪೆಕ್ಟರ್ (GD) ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ: ನವೆಂಬರ್ 12, 2026
ಅರ್ಜಿ ಸಲ್ಲಿಸಲು ಕೊನೆಯ ದಿನ: ಡಿಸೆಂಬರ್ 31, 2026
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ: ಗಡಿ ಭದ್ರತಾ ಪಡೆ (BSF)
ಹುದ್ದೆ: ಸಬ್ ಇನ್‌ಸ್ಪೆಕ್ಟರ್
ಒಟ್ಟು ಹುದ್ದೆಗಳು: 1,167
ಉದ್ಯೋಗದ ಸ್ಥಳ: ಅಖಿಲ ಭಾರತ
ವೇತನ: ಪೇ ಮ್ಯಾಟ್ರಿಕ್ಸ್ ಹಂತ 6ರ ಪ್ರಕಾರ ರೂ. 35,400ರಿಂದ ರೂ. 1,12,400 ಹಾಗೂ ಇತರೆ ಭತ್ಯೆಗಳು
► ಹುದ್ದೆಗಳ ವಿವರ:
BSF: 235
CRPF: 337
SSB: 125
ITBP: 430
*ಅರ್ಹತೆಗಳು
BSF, CRPF, ITBP ಅಥವಾ SSBಗಳಲ್ಲಿ ಸೇವೆಯಲ್ಲಿರುವ ಕಾನ್ಸ್‌ಟೇಬಲ್ (GD), ಕಾನ್ಸ್‌ಟೇಬಲ್ (Tradesmen), ಹೆಡ್ ಕಾನ್ಸ್‌ಟೇಬಲ್ (GD) ಹಾಗೂ ಸಹಾಯಕ ಸಬ್ ಇನ್‌ಸ್ಪೆಕ್ಟರ್ (GD) ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಮೂಲ ತರಬೇತಿ ಸೇರಿದಂತೆ ಕನಿಷ್ಠ ನಾಲ್ಕು ವರ್ಷಗಳ ನಿಯಮಿತ ಸೇವೆ ಪೂರ್ಣಗೊಳಿಸಿರಬೇಕು.
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
ಕಳೆದ ಐದು ವರ್ಷಗಳ APARನಲ್ಲಿ ಉತ್ತಮ ದಾಖಲೆ ಹೊಂದಿರಬೇಕು.
*ವಯೋಮಿತಿ
ಗರಿಷ್ಠ ವಯಸ್ಸು: 32 ವರ್ಷ
SC/ST ಅಭ್ಯರ್ಥಿಗಳಿಗೆ ಐದು ವರ್ಷಗಳ ವಯೋಸಡಿಲಿಕೆ.
ಆಯ್ಕೆ ಪ್ರಕ್ರಿಯೆ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ದೈಹಿಕ ಸಾಮರ್ಥ್ಯ ಪರೀಕ್ಷೆ (PET), ದಾಖಲೆ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.
CBT ಪರೀಕ್ಷೆಯ ವಿವರ ಪರೀಕ್ಷೆ ಒಟ್ಟು 200 ಅಂಕಗಳಿಗೆ ನಡೆಯಲಿದ್ದು, ನಾಲ್ಕು ವಿಭಾಗಗಳಲ್ಲಿ ತಲಾ 50 ಅಂಕಗಳಿರುತ್ತವೆ.
ಸಾಮಾನ್ಯ ಬುದ್ಧಿವಂತಿಕೆ ಮತ್ತು ತಾರ್ಕಿಕ ಸಾಮರ್ಥ್ಯ: 50 ಅಂಕ
ಗ್ರಹಿಕೆ ಮತ್ತು ಸಂವಹನ ಕೌಶಲ: 50 ಅಂಕ
ಸಂಖ್ಯಾತ್ಮಕ ಸಾಮರ್ಥ್ಯ: 50 ಅಂಕ
ಸಾಮಾನ್ಯ ಜಾಗೃತಿ ಮತ್ತು ವೃತ್ತಿಪರ ಜ್ಞಾನ: 50 ಅಂಕ
ಅರ್ಹತೆ ಪಡೆಯಲು ಪ್ರತಿ ವಿಭಾಗದಲ್ಲಿ ಕನಿಷ್ಠ ಶೇ. 45 ಹಾಗೂ ಒಟ್ಟಾರೆ ಶೇ. 50 ಅಂಕ ಗಳಿಸಬೇಕು. SC/ST ಅಭ್ಯರ್ಥಿಗಳಿಗೆ ಶೇ. 5ರಷ್ಟು ವಿನಾಯಿತಿ ನೀಡಲಾಗಿದೆ.
ದೈಹಿಕ ಸಾಮರ್ಥ್ಯ ಪರೀಕ್ಷೆ (PET)
ಪುರುಷ ಅಭ್ಯರ್ಥಿಗಳು:
100 ಮೀ. ಓಟ: 16 ಸೆಕೆಂಡು
1.6 ಕಿ.ಮೀ. ಓಟ: 6 ನಿಮಿಷ 30 ಸೆಕೆಂಡು
ಉದ್ದ ಜಿಗಿತ: 12 ಅಡಿ
ಎತ್ತರ ಜಿಗಿತ: 3.9 ಅಡಿ
ಶಾಟ್ ಪುಟ್: 14.8 ಅಡಿ
ಮಹಿಳಾ ಅಭ್ಯರ್ಥಿಗಳು:
100 ಮೀ. ಓಟ: 18 ಸೆಕೆಂಡು
800 ಮೀ. ಓಟ: 4 ನಿಮಿಷ
ಉದ್ದ ಜಿಗಿತ: 9 ಅಡಿ
ಎತ್ತರ ಜಿಗಿತ: 3 ಅಡಿ
ಅರ್ಜಿ ಸಲ್ಲಿಸುವ ವಿಧಾನ ಅಭ್ಯರ್ಥಿಗಳು BSFನ ಅಧಿಕೃತ ನೇಮಕಾತಿ ವೆಬ್‌ಸೈಟ್ https://rectt.bsf.gov.in/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಹತೆಯನ್ನು ಖಚಿತಪಡಿಸಿಕೊಳ್ಳಬೇಕು.
ಅರ್ಜಿ ಸಲ್ಲಿಸುವಾಗ Service-cum-Eligibility Certificate, Undertaking ಮತ್ತು NOCಗಳನ್ನು ಅಪ್‌ಲೋಡ್ ಮಾಡಬೇಕು. ಚಾಲ್ತಿಯಲ್ಲಿರುವ ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಗುರುತಿನ ಚೀಟಿ, ವಯಸ್ಸಿನ ದೃಢೀಕರಣ ದಾಖಲೆ, ಪದವಿ ಅಂಕಪಟ್ಟಿಗಳು, ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೊ ಹಾಗೂ ಸಹಿಯನ್ನು ಮುಂಚಿತವಾಗಿ ಸ್ಕ್ಯಾನ್ ಮಾಡಿ ಸಿದ್ಧವಾಗಿಟ್ಟುಕೊಳ್ಳಬೇಕು.
ಅರ್ಜಿಯಲ್ಲಿ ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರಗಳನ್ನು ಸರಿಯಾಗಿ ನಮೂದಿಸಿ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಅರ್ಜಿ ಶುಲ್ಕವಿಲ್ಲ. ಎಲ್ಲಾ ವಿವರಗಳನ್ನು ಪರಿಶೀಲಿಸಿದ ಬಳಿಕ Submit ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ದೊರೆಯುವ Application Number ಅಥವಾ ಸ್ವೀಕೃತಿ ಪತ್ರವನ್ನು ಭವಿಷ್ಯದ ಉಲ್ಲೇಖಕ್ಕಾಗಿ ಡೌನ್‌ಲೋಡ್ ಮಾಡಿಟ್ಟುಕೊಳ್ಳಬೇಕು.