ಮಧ್ಯಪ್ರಾಚ್ಯ ತೊರೆಯುವಂತೆ ಅಮೆರಿಕನ್ ಪ್ರಜೆಗಳಿಗೆ ಸಲಹೆ
Update: 2026-08-01 23:05 IST
ಸಾಂದರ್ಭಿಕ ಚಿತ್ರ | Photo Credit : magnific.com
ವಾಶಿಂಗ್ಟನ್: ಪ್ರಾದೇಶಿಕ ಸಂಘರ್ಷದಲ್ಲಿ ʼಅನಿರೀಕ್ಷಿತ ತೀವ್ರತೆ' ಹೆಚ್ಚಾಗುವ ಬಗ್ಗೆ ಜಾಗರೂಕರಾಗಿರಲು ಮತ್ತು ದೇಶ ತೊರೆಯಲು ಸಿದ್ಧರಾಗಿರುವಂತೆ ಮಧ್ಯಪ್ರಾಚ್ಯದ ಹಲವು ರಾಜಧಾನಿಗಳಲ್ಲಿರುವ ಅಮೆರಿಕದ ರಾಯಭಾರ ಕಚೇರಿಗಳು ಅಮೆರಿಕನ್ ಪ್ರಜೆಗಳಿಗೆ ಎಚ್ಚರಿಕೆ ನೀಡಿವೆ.
ಈ ಭಾಗದಲ್ಲಿರುವ ಅಮೆರಿಕನ್ನರು ಇಲ್ಲಿಂದ ಹೊರಡುವುದನ್ನು ಪರಿಗಣಿಸಬೇಕು, ಅಥವಾ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದರೆ ತಕ್ಷಣವೇ ನಿರ್ಗಮಿಸಲು ಸಿದ್ಧರಾಗಿರಬೇಕು' ಎಂದು ಜೋರ್ಡಾನ್‍ನ ಅಮ್ಮಾನ್, ಇಸ್ರೇಲ್‍ನ ಜೆರುಸಲೇಂ ಮತ್ತು ಇರಾಕ್‍ನ ಬಗ್ದಾದ್‍ನಲ್ಲಿರುವ ಅಮೆರಿಕ ರಾಯಭಾರ ಕಚೇರಿಗಳು ಭದ್ರತಾ ಸೂಚನೆಯನ್ನು ಹಂಚಿಕೊಂಡಿವೆ.