×
Ad

"ಬಂದರ್ ಅಬ್ಬಾಸ್" ಮೇಲಿನ ದಾಳಿಗೆ ಪ್ರತಿಯಾಗಿ ಅಮೆರಿಕದ ವಾಯು ನೆಲೆ ಮೇಲೆ ದಾಳಿ: IRGC ಹೇಳಿಕೆ

Update: 2026-05-28 10:31 IST

Photo Credit : PTI 

ಟೆಹರಾನ್: ಇಂದು ಬೆಳಗ್ಗೆ ಇರಾನ್ ನ ಬಂದರ್ ಅಬ್ಬಾಸ್ ಸಮೀಪ ಅಮೆರಿಕ ಸೇನಾಪಡೆಗಳು ನಡೆಸಿದ ದಾಳಿಗೆ ಪ್ರತಿಯಾಗಿ ಅಮೆರಿಕ ವಾಯು ನೆಲೆಯೊಂದರ ಮೇಲೆ ದಾಳಿ ನಡೆಸಲಾಗಿದೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೇಳಿದೆ.

ಅಮೆರಿಕದ ಆಕ್ರಮಣ ಪ್ರಾಂತ್ಯವೆಂದು ಗುರುತಿಸಲಾಗಿರುವ ವಾಯು ನೆಲೆಯೊಂದರ ಮೇಲೆ ದಾಳಿ ನಡೆಸಲಾಗಿದೆ ಎಂದು ತಾಸ್ನೀಮ್ ನಲ್ಲಿ ಪ್ರಕಟವಾಗಿರುವ ಹೇಳಿಕೆಯಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೇಳಿದೆ.

ಆದರೆ, ಸ್ಥಳೀಯ ಕಾಲಮಾನವಾದ ಬೆಳಗ್ಗೆ ಸುಮಾರು 4.50 ಗಂಟೆಗೆ ನಡೆದಿರುವ ಈ ದಾಳಿ ಯಾವ ಪ್ರದೇಶದಲ್ಲಿ ನಡೆದಿದೆ ಎಂಬುದನ್ನು ಅದು ತಿಳಿಸಿಲ್ಲ.

ಬಂದರ್ ಅಬ್ಬಾಸ್ ನ ಹೊರ ವಲಯದ ಮೇಲೆ ಅಮೆರಿಕ ಸೇನಾಪಡೆ ದಾಳಿ ನಡೆಸಿದೆ ಎಂದು ವರದಿಯಾದ ಬೆನ್ನಿಗೇ ಈ ಪ್ರಕಟಣೆ ಹೊರ ಬಿದ್ದಿದೆ.

ಆಕ್ರಮಣಕ್ಕೆ ಉತ್ತರ ನೀಡದೆ ಬಿಡುವುದಿಲ್ಲ ಎಂದು ಹೇಳಿರುವ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್, ಮತ್ತಷ್ಟು ಸೇನಾ ಕ್ರಮಗಳನ್ನು ಕೈಗೊಳ್ಳುವ ಎಚ್ಚರಿಕೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News