×
Ad

ಅಮೆರಿಕದ MQ-9 ಡ್ರೋನ್ ಹೊಡೆದುರುಳಿಸಿದ ಇರಾನ್: ವರದಿ

Update: 2026-05-26 23:25 IST

Photo Credit : X

ಟೆಹರಾನ್, ಮೇ 26: ಇರಾನ್‌ನ ವಾಯುಪ್ರದೇಶವನ್ನು ಉಲ್ಲಂಘಿಸಿದ ಅಮೆರಿಕದ ಎಂಕ್ಯು-9 ರೀಪರ್ ಡ್ರೋನ್ ಅನ್ನು ಇರಾನ್‌ ಪಡೆಗಳು ಹೊಡೆದುರುಳಿಸಿದೆ ಮತ್ತು ಅಮೆರಿಕದ ಯುದ್ಧವಿಮಾನವನ್ನು ಹಿಮ್ಮೆಟ್ಟಿಸಿದೆ ಎಂದು ಇರಾನ್ ಮಂಗಳವಾರ ಪ್ರತಿಪಾದಿಸಿದೆ.

ಅಮೆರಿಕದ ಎಂಕ್ಯು-9 ಡ್ರೋನ್, ಆರ್ಕ್ಯು-4 ಕಣ್ಗಾವಲು ಡ್ರೋನ್ ಮತ್ತು ಎಫ್-35 ಯುದ್ಧವಿಮಾನವು ವಾಯುಪ್ರದೇಶವನ್ನು ಉಲ್ಲಂಘಿಸಿದ್ದನ್ನು ಇರಾನ್‌ನ ವಾಯುರಕ್ಷಣಾ ವ್ಯವಸ್ಥೆ ಪತ್ತೆಹಚ್ಚಿ ಪ್ರತಿ ದಾಳಿ ನಡೆಸಿದೆ. ಹಾರ್ಮುಝ್‌ ಜಲಸಂಧಿಯ ಸನಿಹದಲ್ಲಿರುವ ಖೆಷ್ಮ್ ದ್ವೀಪದ ಸಮುದ್ರ ಪ್ರದೇಶದ ವ್ಯಾಪ್ತಿಯಲ್ಲಿ ಒಂದು ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ. ಶತ್ರುಗಳ ಯುದ್ಧವಿಮಾನಗಳನ್ನು ನಾಶಗೊಳಿಸಲು ಸುಧಾರಿತ ಸ್ಥಳೀಯ ರಕ್ಷಣಾ ವ್ಯವಸ್ಥೆಗಳನ್ನು ನಿಯೋಜಿಸಲಾಗಿದೆ. ಗುಪ್ತ ಸಾಮರ್ಥ್ಯಗಳನ್ನು ಹೊಂದಿರುವ, ಸುಧಾರಿತ ತಂತ್ರಜ್ಞಾನದ ಅರಾಶ್-ಇ- ಕಮಂಗಿರ್ ಪ್ರತಿಬಂಧಕ ಡ್ರೋನ್ ವ್ಯವಸ್ಥೆಯ ಮೂಲಕ ಡ್ರೋನ್ ಹೊಡೆದುರುಳಿಸಲಾಗಿದೆ. ಇದು ಇರಾನ್ ರವಾನಿಸಿರುವ ಸ್ಪಷ್ಟ ಮತ್ತು ನಿರ್ಣಾಯಕ ಸಂದೇಶವಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ `ಫಾರ್ಸ್ ' ಸುದ್ದಿಸಂಸ್ಥೆ ಮಂಗಳವಾರ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News