ʼರಶ್ಯಾದ ಹುಡುಗಿಯರಿಂದ ಲೈಂಗಿಕ ರೋಗ, ಪತ್ನಿಗೆ ಮೋಸʼ: ಎಪ್ಸ್ಟೀನ್ ಕಡತದಲ್ಲಿ ಬಿಲ್ ಗೇಟ್ಸ್ ಬಗ್ಗೆ ಸ್ಪೋಟಕ ಅಂಶಗಳು ಉಲ್ಲೇಖ!
ಬಿಲ್ ಗೇಟ್ಸ್ (Photo: PTI)
ವಾಶಿಂಗ್ಟನ್: ಅಮೆರಿಕದ ನ್ಯಾಯಾಂಗ ಇಲಾಖೆ ಹೊಸ ಜೆಫ್ರಿ ಎಪ್ಸ್ಟೀನ್ ಕಡತವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಬಗ್ಗೆ ಸ್ಪೋಟಕ ಅಂಶವನ್ನು ಕೂಡ ಉಲ್ಲೇಖಿಸಲಾಗಿದೆ.
ಜೆಫ್ರಿ ಎಪ್ಸ್ಟೀನ್ ಕಡತದಲ್ಲಿ ಬಿಲ್ ಗೇಟ್ಸ್‌ಗೆ ʼರಷ್ಯನ್ ಹುಡುಗಿಯರಿಂದʼ ಲೈಂಗಿಕವಾಗಿ ಹರಡುವ ರೋಗ ತಗುಲಿತ್ತು ಎಂದು ಉಲ್ಲೇಖಿಸಿರುವ ಇಮೇಲ್ ಎಲ್ಲರ ಗಮನ ಸೆಳೆಯಿತು.
ಜೆಫ್ರಿ ಎಪ್ಸ್ಟೀನ್‌ಗೆ ಸೇರಿವೆ ಎಂದು ಹೇಳಲಾಗುತ್ತಿರುವ 2013ರ ಸ್ವಯಂ-ಇಮೇಲ್‌ಗಳ ಸ್ಕ್ರೀನ್‌ಶಾಟ್‌ಗಳಲ್ಲಿ, ಬಿಲ್ ಗೇಟ್ಸ್ ಅವರಿಗೆ “ರಷ್ಯನ್ ಹುಡುಗಿಯರಿಂದ” ಲೈಂಗಿಕ ರೋಗ ತಗುಲಿದ್ದು, ಇದರಿಂದ ಆಂಟಿಬಯೋಟಿಕ್‌ಗಳನ್ನು ಪತ್ನಿ ಮೆಲಿಂಡಾಗೆ ಗುಪ್ತವಾಗಿ ನೀಡುವಂತೆ ಕೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಅಮೆರಿಕದ ನ್ಯಾಯ ಇಲಾಖೆ ಶುಕ್ರವಾರ ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ, 2013ರ ಜುಲೈ 18ರಂದು ಜೆಫ್ರಿ ಎಪ್ಸ್ಟೀನ್ ಒಂದು ದೀರ್ಘ ಸಂದೇಶವನ್ನು ಬರೆದಿದ್ದು, ತಮ್ಮ ಸಂಬಂಧವನ್ನು ಕೊನೆಗೊಳಿಸಿದ್ದಕ್ಕಾಗಿ ಬಿಲ್ ಗೇಟ್ಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾನೆ ಮತ್ತು ವೈಯಕ್ತಿಕ ವಿಚಾರಗಳನ್ನು ಮುಚ್ಚಿಹಾಕಲು ನಡೆದ ಪ್ರಯತ್ನಗಳ ಬಗ್ಗೆ ಆರೋಪಿಸಿದ್ದಾನೆ ಎಂದು ವರದಿಯಾಗಿದೆ.
ಲೈಂಗಿಕವಾಗಿ ಹರಡುವ ರೋಗ ಎಸ್‌ಟಿಡಿ ಕುರಿತು ಇರುವ ಇಮೇಲ್‌ಗಳನ್ನು ದಯವಿಟ್ಟು ಅಳಿಸಿ ಹಾಕುವಂತೆ ನೀವು ನನ್ನನ್ನು ವಿನಂತಿಸಿದ್ದೀರಿ. ನೀವು ಮೆಲಿಂಡಾಗೆ ಗುಪ್ತವಾಗಿ ನೀಡಲು ಆಂಟಿಬಯೋಟಿಕ್‌ಗಳನ್ನು ಒದಗಿಸಬೇಕು ಎಂದು ವಿನಂತಿ ಮಾಡಿಕೊಂಡಿದ್ದೀರಿ ಎಂದು ಕಡತದಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.