×
Ad

ಅಮೆರಿಕನ್ ದಾಳಿ ಭೀತಿ| ಸಾವಿರ ಡ್ರೋನ್‍ಗಳನ್ನು ನಿಯೋಜಿಸಿದ ಇರಾನ್: ವರದಿ

Update: 2026-01-30 21:58 IST

Photo Credit : NDTV 

ಟೆಹ್ರಾನ್, ಜ.30: ಸಂಭಾವ್ಯ ಅಮೆರಿಕನ್ ವೈಮಾನಿಕ ದಾಳಿಯ ಹಿನ್ನೆಲೆಯಲ್ಲಿ ಇರಾನ್ ತನ್ನ ಸಶಸ್ತ್ರ ಪಡೆಗಳಾದ್ಯಂತ ಸರಿಸುಮಾರು 1000 ಹೊಸ ಕಾರ್ಯತಂತ್ರದ ಡ್ರೋನ್‍ಗಳನ್ನು ನಿಯೋಜಿಸಿದೆ. ಮಿಲಿಟರಿ ರಹಸ್ಯಗಳನ್ನು ಕಾಪಾಡುವ ಸಲುವಾಗಿ ಡ್ರೋನ್ ನಿಯೋಜನೆಯ ಯಾವುದೇ ಛಾಯಾಚಿತ್ರಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಇರಾನ್‍ನ ಸರ್ಕಾರಿ ಸ್ವಾಮ್ಯದ `ತಸ್ನಿಮ್' ಸುದ್ದಿಸಂಸ್ಥೆ ವರದಿ ಮಾಡಿದೆ.

ವಿಮಾನವಾಹಕ ಯುದ್ದನೌಕೆ ಅಬ್ರಹಾಂ ಲಿಂಕನ್ ನೇತೃತ್ವದ ಸಮರ ನೌಕೆಗಳ ಪಡೆಯು ಇರಾನಿನ ಮೇಲೆ ಕಳೆದ ಜೂನ್‍ನಲ್ಲಿ ನಡೆಸಿದ ಕಾರ್ಯಾಚರಣೆಗಿಂತಲೂ ಭೀಕರ ದಾಳಿ ನಡೆಸಲು ಸಜ್ಜಾಗಿವೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಹಿನ್ನೆಲೆಯಲ್ಲಿ ಇರಾನ್ ಈ ಕ್ರಮ ಕೈಗೊಂಡಿದೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News