Photo Credit : indiatoday.in

ಒಟ್ಟಾವಾ, ನ.21: ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ವಾಲ್ಮಾರ್ಟ್ ಮಳಿಗೆಯ ಹೊರಗೆ ನಡೆದ ಮಾರಣಾಂತಿಕ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಭಾರತೀಯ ಮೂಲದ ದಂಪತಿ ಮೃತಪಟ್ಟಿದ್ದಾರೆ. ಇದು ಪೂರ್ವನಿಯೋಜಿತ (ಉದ್ದೇಶಿತ) ದಾಳಿಯಾಗಿದ್ದು, ಸಂಘಟಿತ ಅಪರಾಧ ಜಾಲದೊಂದಿಗೆ ನಂಟು ಹೊಂದಿದೆ ಇಂದು ಶಂಕಿಸಲಾಗಿದೆ ಇಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ನವೆಂಬರ್ 15ರಂದು ರಾತ್ರಿ ವಾಲ್ಮಾರ್ಟ್ ಮಳಿಗೆಯ ಹೊರಗೆ ನಡೆದ ಈ ಗುಂಡಿನ ದಾಳಿಯಲ್ಲಿ 23 ವರ್ಷದ ಗಗನ್ಪ್ರೀತ್ ರೆಹಾಲ್ ಮತ್ತು 24 ವರ್ಷದ ಸುಖ್ಜೀತ್ ಕೌರ್ ಗಾಯಗೊಂಡಿದ್ದು, ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಇಂದು ಅಧಿಕಾರಿಗಳನ್ನು ಉಲ್ಲೇಖಿಸಿ CBC ನ್ಯೂಸ್ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೃಷ್ಣ ಮೂರ್ತಿ , ವಾರ್ತಾಭಾರತಿ

contributor