ಹಿರಿಯ ಹೂತಿ ಕಮಾಂಡರ್ ಹತ್ಯೆ: ಯಮನ್ ಸರಕಾರಿ ಪಡೆಗಳ ಹೇಳಿಕೆ
Photo Credit : X
ಏಡನ್, ನ.21: ತೈಝ್ ನಲ್ಲಿ ನಡೆದ ದಾಳಿಗಳನ್ನು ಹಿಮ್ಮೆಟ್ಟಿಸುವ ವೇಳೆ ಹಿರಿಯ ಹೂತಿ ಕಮಾಂಡರ್ ಒಬ್ಬರನ್ನು ಹತ್ಯೆ ಮಾಡಿರುವುದಾಗಿ ಯಮನ್ ಸರಕಾರಿ ಪಡೆಗಳು ಶನಿವಾರ ತಿಳಿಸಿವೆ.
ನಗರದ ಪಶ್ಚಿಮ ಭಾಗದಲ್ಲಿರುವ ಜಬಲ್ ಹಬಾಶಿಯಲ್ಲಿನ ಕ್ಷಿಪಣಿ ಉಡಾವಣಾ ವೇದಿಕೆಗಳು ಹಾಗೂ ಹೂತಿ ಹೋರಾಟಗಾರರ ಗುಂಪುಗಳನ್ನು ಗುರಿಯಾಗಿಸಿಕೊಂಡು ಸೌದಿ ನೇತೃತ್ವದ ಮೈತ್ರಿಕೂಟದ ಪಡೆಗಳು ವಾಯುದಾಳಿ ನಡೆಸಿವೆ.
ಉತ್ತರ ಯಮನ್ ನ ಸಾದಾ ಪ್ರಾಂತದ ಕತಾಫ್ ಮತ್ತು ಅಲ್-ಬುಕಾ ಜಿಲ್ಲೆಗಳ ಮರಾರ್ ಪ್ರದೇಶದಲ್ಲಿನ ದೂರಸಂಪರ್ಕ ಜಾಲದ ಮೇಲೆ ಎರಡು ವಾಯುದಾಳಿಗಳು ನಡೆದಿವೆ. ತೈಝ್ ನ ಅಲ್-ಮವಾಸಿತ್ ಜಿಲ್ಲೆಯ ಜಬಲ್ ಅಲ್-ಶವಾರ್ ಮೇಲೆ ನಡೆದ ದಾಳಿಯ ನಂತರ ದೂರಸಂಪರ್ಕ ಮೂಲಸೌಕರ್ಯಗಳು ನಾಶವಾಗಿದ್ದು, ಹಲವಾರು ಮನೆಗಳಿಗೂ ಹಾನಿಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.