ಪ್ರವಾಹದ ಬಗ್ಗೆ ಚೀನಾ ಮುನ್ನೆಚ್ಚರಿಕೆ ನೀಡಲಿಲ್ಲ: ನೇಪಾಳದ ಮಾಜಿ ಸಚಿವರ ಆರೋಪ
Photo Credit: PTI
ಕಠ್ಮಂಡು: ನೇಪಾಳವನ್ನು ಕಂಗೆಡಿಸಿದ ಭೀಕರ ಪ್ರವಾಹದ ಬಗ್ಗೆ ಚೀನಾ ಸೂಕ್ತ ಸಮಯದಲ್ಲಿ ಮುನ್ನೆಚ್ಚರಿಕೆ ನೀಡಲಿಲ್ಲ ಎಂದು ನೇಪಾಳದ ಮಾಜಿ ಅರಣ್ಯ ಮತ್ತು ಪರಿಸರ ಸಚಿವ ಮಾಧವ್ ಪ್ರಸಾದ್ ಚೌಲಾಗೈನ್ ಆರೋಪಿಸಿದ್ದಾರೆ.
ಬುಧವಾರ ಬೆಳಿಗ್ಗೆ ಗಡಿ ಪ್ರದೇಶದಲ್ಲಿ ಉಂಟಾದ ಪ್ರವಾಹವು ನೇಪಾಳ ಮತ್ತು ಟಿಬೆಟ್‍ನ ಹಲವು ಭಾಗಗಳನ್ನು ಧ್ವಂಸಗೊಳಿಸಿತು. ಈ ವಿಕೋಪ ಸಂಭವಿಸುವ ಮೊದಲು ಚೀನಾ ಕಡೆಯಿಂದ ಯಾವುದೇ ಮುನ್ನೆಚ್ಚರಿಕೆ ತಲುಪಿರಲಿಲ್ಲ. 2025ರಲ್ಲಿ ಎರಡೂ ದೇಶಗಳು ಪರಸ್ಪರ ಒಪ್ಪಂದದ ಪ್ರೋಟೋಕಾಲ್ ಅನ್ನು ರೂಪಿಸಿಕೊಂಡಿದ್ದವು. ಆದರೆ ಬುಧವಾರದ ದುರಂತಕ್ಕಿಂತ ಮೊದಲು ಈ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿರಲಿಲ್ಲ ಎಂದು ಚೌಲಾಗೈನ್ ಹೇಳಿದ್ದಾರೆ.
ಈ ಆರೋಪಗಳನ್ನು ನೇಪಾಳದಲ್ಲಿರುವ ಚೀನಾ ರಾಯಭಾರ ಕಚೇರಿಯು ತಿರಸ್ಕರಿಸಿದ್ದು, ತನ್ನ ವಿಪತ್ತು ಮುನ್ನೆಚ್ಚರಿಕೆ ವ್ಯವಸ್ಥೆಯ ತಾಂತ್ರಿಕ ಮಿತಿಗಳನ್ನು ಇದಕ್ಕೆ ಕಾರಣವಾಗಿ ಉಲ್ಲೇಖಿಸಿದೆ.