ಡೊನಾಲ್ಡ್ ಟ್ರಂಪ್ | Photo Credit : PTI

ವಾಶಿಂಗ್ಟನ್: ಉದ್ಯೋಗ ಕಳೆದುಕೊಂಡ ನಂತರ ಕೆಲವು ವಿದೇಶಿ ಉದ್ಯೋಗಿಗಳಿಗೆ ಸಿಗುವ 60 ದಿನಗಳ ಗ್ರೇಸ್ ಅವಧಿಯನ್ನು (ಸಮಯಾವಕಾಶ) ರದ್ದುಗೊಳಿಸುವ ಟ್ರಂಪ್ ಆಡಳಿತದ ಪ್ರಸ್ತಾಪವು ಶ್ವೇತಭವನದ ಪ್ರಮುಖ ನಿಯಂತ್ರಕ ಪರಿಶೀಲನೆಯನ್ನು ಪೂರ್ಣಗೊಳಿಸಿದೆ.

ಆಂತರಿಕ ಭದ್ರತಾ ಇಲಾಖೆಯ ಪ್ರಸ್ತಾಪಕ್ಕೆ ಮಾಹಿತಿ ಮತ್ತು ನಿಯಂತ್ರಣ ವ್ಯವಹಾರಗಳ ಕಚೇರಿ ಗುರುವಾರ ಅನುಮೋದನೆ ನೀಡಿದೆ. ಈ ಪ್ರಸ್ತಾಪವು ಇನ್ನೂ ಜಾರಿಗೆ ಬಂದಿಲ್ಲ ಮತ್ತು ಪ್ರಸ್ತುತ ಇರುವ 60 ದಿನಗಳ ಗ್ರೇಸ್ ಅವಧಿ ಜಾರಿಯಲ್ಲಿದೆ.

ಈ ಪ್ರಸ್ತಾವಿತ ನಿಯಮವನ್ನು ಪ್ರಕಟಿಸಿ ಸಾರ್ವಜನಿಕ ಪರಿಶೀಲನೆಗೆ ಮುಕ್ತಗೊಳಿಸಿದ ನಂತರ ಇದರ ಸ್ಪಷ್ಟ ವ್ಯಾಪ್ತಿ ತಿಳಿಯಲಿದೆ. ಅಮೆರಿಕದ ನುರಿತ ಉದ್ಯೋಗಿಗಳಿಗೆ ನೀಡುವ ವೀಸಾ ಕಾರ್ಯಕ್ರಮದ ಅಡಿಯಲ್ಲಿ ಅತಿ ಹೆಚ್ಚು ಪ್ರಯೋಜನ ಪಡೆಯುವ ಎಚ್-1ಬಿ ಉದ್ಯೋಗಿಗಳಿಗೆ, ವಿಶೇಷವಾಗಿ ಭಾರತೀಯರಿಗೆ ಈ ಕ್ರಮವು ಹೆಚ್ಚಿನ ಪರಿಣಾಮ ಬೀರಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor