Photo: x.com/MarioNawfal

ವಾಷಿಂಗ್ಟನ್: ಗಲ್ಫ್ ಪ್ರದೇಶದಲ್ಲಿ ಸುಮಾರು ಮೂರು ತಿಂಗಳ ಕಾಲ ನಿಯೋಜನೆಗೊಂಡಿದ್ದ ಅಮೆರಿಕದ USS ಜಾರ್ಜ್ ವಾಷಿಂಗ್ಟನ್ ವಿಮಾನವಾಹಕ ನೌಕೆಯು ಅಲ್ಲಿಂದ ನಿರ್ಗಮಿಸಿದೆ ಎಂದು US ನೌಕಾಪಡೆಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ USNI News ವರದಿ ಮಾಡಿದೆ.

ಆದರೆ, ವಿಮಾನವಾಹಕ ನೌಕೆಯ ನಿರ್ಗಮನದ ಕುರಿತು ವಕ್ತಾರರು ಯಾವುದೇ ಹೆಚ್ಚುವರಿ ವಿವರಗಳನ್ನು ನೀಡಿಲ್ಲ ಎಂದು ವರದಿ ತಿಳಿಸಿದೆ.

ಇದೇ ವೇಳೆ, USS ಥಿಯೋಡರ್ ರೂಸ್ವೆಲ್ಟ್ ವಿಮಾನವಾಹಕ ನೌಕೆಯು ಸೋಮವಾರ ಮಧ್ಯಪ್ರಾಚ್ಯಕ್ಕೆ ಆಗಮಿಸಿದೆ ಎಂದು US ಅಧಿಕಾರಿಯೊಬ್ಬರು Aljazeera ಗೆ ತಿಳಿಸಿದ್ದಾರೆ. USS ಜಾರ್ಜ್ ವಾಷಿಂಗ್ಟನ್ ನಿರ್ಗಮಿಸಿರುವ ಹಿನ್ನೆಲೆಯಲ್ಲಿ, USS ಜಾರ್ಜ್ H W ಬುಷ್ ಈ ಪ್ರದೇಶದಲ್ಲಿ ನಿಯೋಜನೆಗೊಂಡಿರುವ ಏಕೈಕ ವಿಮಾನವಾಹಕ ನೌಕೆಯಾಗಿದೆ.

ಜಾರ್ಜ್ ವಾಷಿಂಗ್ಟನ್ ವಿಮಾನವಾಹಕ ನೌಕೆಯು ಜಪಾನ್‌ ನಲ್ಲಿರುವ ತನ್ನ ನೆಲೆಗೆ ಮರಳುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Contributor - ಇರ್ಷಾದ್ ಎಂ. ವೇಣೂರು/ವಾರ್ತಾಭಾರತಿ

contributor

ಇರ್ಷಾದ್ ಎಂ. ವೇಣೂರು ಅವರು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿ 13 ವರ್ಷಗಳ ಅನುಭವ ಹೊಂದಿದ್ದಾರೆ. ಪ್ರಸ್ತುತ ‘ವಾರ್ತಾಭಾರತಿ’ಯಲ್ಲಿ ಡಿಜಿಟಲ್ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಡೆಕ್ಕನ್ ಹೆರಾಲ್ಡ್–ಪ್ರಜಾವಾಣಿ’ ಸಮೂಹದಲ್ಲಿ ಫೋಟೊ ಜರ್ನಲಿಸ್ಟ್ ಆಗಿಯೂ ಕೆಲಸ ಮಾಡಿದ್ದಾರೆ. ಅಂತರರಾಷ್ಟ್ರೀಯ ವಿದ್ಯಮಾನಗಳು, ಮಧ್ಯಪ್ರಾಚ್ಯದ ಸಂಘರ್ಷಗಳು, ಗಲ್ಫ್ ರಾಷ್ಟ್ರಗಳ ಬೆಳವಣಿಗೆಗಳು, ರಾಜಕೀಯ, ವಾಯುಯಾನ, ಅಪರಾಧ ಮತ್ತು ಕ್ರೀಡೆ ಅವರ ಆಸಕ್ತಿಯ ಸುದ್ದಿ ಕ್ಷೇತ್ರಗಳಾಗಿವೆ.