ಟ್ರಂಪ್, ನೆತನ್ಯಾಹು ಹತ್ಯೆಗೆ ಬಹುಮಾನ: ಮಸೂದೆ ಮಂಡಿಸಲು ಇರಾನ್ ಚಿಂತನೆ; ವರದಿ
ಡೊನಾಲ್ಡ್ ಟ್ರಂಪ್ , ಬೆಂಜಮಿನ್ ನೆತನ್ಯಾಹು | Photo Credit : AP , PTI
ಟೆಹರಾನ್, ಮೇ 19: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹತ್ಯೆ ಮಾಡಿದವರಿಗೆ 58 ದಶಲಕ್ಷ ಡಾಲರ್ ಬಹುಮಾನ ನೀಡುವ ಮಸೂದೆಯನ್ನು ಮಂಡಿಸಲು ಇರಾನ್ ಚಿಂತನೆ ನಡೆಸುತ್ತಿರುವುದಾಗಿ `ಇರಾನ್ ವೈರ್' ವರದಿ ಮಾಡಿದೆ.
ಸಂಸದರು ಇಸ್ಲಾಮಿಕ್ ಗಣರಾಜ್ಯದ ಮಿಲಿಟರಿ ಮತ್ತು ಭದ್ರತಾ ಪಡೆಗಳಿಂದ ಪ್ರತಿಕ್ರಮ' ಎಂಬ ಶೀರ್ಷಿಕೆಯ ಮಸೂದೆಯನ್ನು ಸಿದ್ಧಪಡಿಸುತ್ತಿದ್ದಾರೆ. ಆಪಾದಿತ ಖಾಮಿನೈ ಹತ್ಯೆಯಲ್ಲಿ ಪಾತ್ರಕ್ಕಾಗಿ' ಟ್ರಂಪ್, ನೆತನ್ಯಾಹು ಮತ್ತು ಅಮೆರಿಕದ ಸೆಂಟ್ರಲ್ ಕಮಾಂಡ್ನ ಕಮಾಂಡರ್ ಅಡ್ಮಿರಲ್ ಬ್ರಾಡ್ ಕೂಪರ್ ಪ್ರತಿಕ್ರಮ ಎದುರಿಸಬೇಕಾಗುತ್ತದೆ ಎಂದು ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಸಮಿತಿಯ ಅಧ್ಯಕ್ಷ ಇಬ್ರಾಹಿಂ ಅಝೀಝಿ ಹೇಳಿದ್ದಾರೆ.
ಪ್ರಸ್ತಾವಿತ ಶಾಸನವು ಇಬ್ಬರು ನಾಯಕರನ್ನು ಗುರಿಯಾಗಿಸುವ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ಸುಮಾರು 58 ದಶಲಕ್ಷ ಡಾಲರ್ ಬಹುಮಾನ ನಿಗದಿಪಡಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.