×
Ad

ಭಾರತ-ನಾರ್ಡಿಕ್ ಸಂಬಂಧ ಹಸಿರು ತಂತ್ರಜ್ಞಾನಕ್ಕೆ ಉನ್ನತೀಕರಣ: ಪ್ರಧಾನಿ ಮೋದಿ ಘೋಷಣೆ

Update: 2026-05-19 22:16 IST

ನರೇಂದ್ರ ಮೋದಿ | Photo Credit : PTI  

ಓಸ್ಲೋ, ಮೇ 19: ಸ್ವಚ್ಛ ಇಂಧನ, ಹಸಿರು ಪರಿವರ್ತನೆ, ವ್ಯಾಪಾರ, ಹೂಡಿಕೆ ಮತ್ತು ನೀಲಿ ಆರ್ಥಿಕತೆ (ಸಾಗರ ಸಂಪನ್ಮೂಲಗಳ ಸಮರ್ಥ ಹಾಗೂ ಸುಸ್ಥಿರ ಬಳಕೆ)ಯಲ್ಲಿ ಸಹಕಾರವನ್ನು ವಿಸ್ತರಿಸುವ ಗುರಿಯನ್ನು ಹೊಂದಿರುವ ಹಸಿರು ತಂತ್ರಜ್ಞಾನ ಮತ್ತು ನಾವೀನ್ಯತೆ ಕಾರ್ಯತಂತ್ರದ ಪಾಲುದಾರಿಕೆಗೆ ತಮ್ಮ ಸಂಬಂಧಗಳನ್ನು ಉನ್ನತೀಕರಿಸಲು ಭಾರತ ಮತ್ತು ನಾರ್ಡಿಕ್ ದೇಶಗಳು ಒಪ್ಪಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಘೋಷಿಸಿದ್ದಾರೆ.

ಓಸ್ಲೋದಲ್ಲಿ ನಡೆದ ಮೂರನೇ ಭಾರತ-ನಾರ್ಡಿಕ್ ಶೃಂಗಸಭೆಯ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ‘ನಿಯಮಾಧಾರಿತ ಅಂತರರಾಷ್ಟ್ರೀಯ ಕ್ರಮವನ್ನು ಎತ್ತಿಹಿಡಿಯಲು ಭಾರತ ಮತ್ತು ನಾರ್ಡಿಕ್ ದೇಶಗಳು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತವೆ’ ಎಂದು ಹೇಳಿದ್ದಾರೆ. ಶೃಂಗಸಭೆಯಲ್ಲಿ ನಾರ್ವೆ, ಡೆನ್ಮಾರ್ಕ್, ಫಿನ್ಲ್ಯಾಂಡ್, ಐಸ್ಲ್ಯಾಂಡ್ ಮತ್ತು ಸ್ವೀಡನ್ ನ ನಾಯಕರು ಭಾಗವಹಿಸಿದ್ದರು.

ಉತ್ತರ ಯುರೋಪ್ನ ಐದು ಪ್ರಮುಖ ದೇಶಗಳಾದ ನಾರ್ವೆ, ಡೆನ್ಮಾರ್ಕ್, ಫಿನ್ಲ್ಯಾಂಡ್, ಐಸ್ಲ್ಯಾಂಡ್ ಮತ್ತು ಸ್ವೀಡನ್ಗಳನ್ನು ನಾರ್ಡಿಕ್ ದೇಶಗಳೆಂದು ಕರೆಯುತ್ತಾರೆ.

‘ಪ್ರಜಾಪ್ರಭುತ್ವ, ಕಾನೂನಿನ ಆಳ್ವಿಕೆ ಮತ್ತು ಬಹುಪಕ್ಷೀಯತೆಗೆ ನಮ್ಮ ಹಂಚಿಕೆಯ ಬದ್ಧತೆಯು ನಮ್ಮನ್ನು ಸಹಜ ಪಾಲುದಾರರನ್ನಾಗಿ ಮಾಡುತ್ತದೆ. ಭಾರತ-ನಾರ್ಡಿಕ್ ಸಂಬಂಧ ಇಡೀ ಜಗತ್ತಿಗೆ ಉತ್ತಮ ಭವಿಷ್ಯವನ್ನು ಖಾತರಿಪಡಿಸುತ್ತದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News