×
Ad

ಡೆಮಾಕ್ರಟಿಕ್ ಸೋಷಿಯಲಿಸ್ಟ್‌ ಗಳು ಅಮೆರಿಕಕ್ಕೆ ಅತಿ ದೊಡ್ಡ ಬೆದರಿಕೆ: ಟ್ರಂಪ್ ಹೇಳಿಕೆ

Update: 2026-06-30 22:40 IST

 ಡೊನಾಲ್ಡ್ ಟ್ರಂಪ್  - Photo: PTI

ವಾಶಿಂಗ್ಟನ್, ಜೂ. 30: ಡೆಮಾಕ್ರಟಿಕ್ ಸೋಷಿಯಲಿಸ್ಟ್‌ಗಳು ಅಮೆರಿಕಕ್ಕೆ "ಅತಿ ದೊಡ್ಡ ಬೆದರಿಕೆ"ಯಾಗಿದ್ದಾರೆ. ಅವರ ಅಭಿಯಾನಗಳು ಮೊದಲ ಮಹಾಯುದ್ಧ, ಎರಡನೇ ಮಹಾಯುದ್ಧ, ಸೆಪ್ಟೆಂಬರ್ 11ರ ಭಯೋತ್ಪಾದಕ ದಾಳಿ ಮತ್ತು ಪರ್ಲ್ ಹಾರ್ಬರ್ ಮೇಲಿನ ದಾಳಿಗಿಂತಲೂ ಹೆಚ್ಚು ಅಪಾಯಕಾರಿಯಾಗಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಪ್ರತಿಪಾದಿಸಿದ್ದಾರೆ.

ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, "ಇದು ಸಮಾಜವಾದವಲ್ಲ, ಕಮ್ಯುನಿಸಂ. ಕೇಳಲು ತುಂಬಾ ಚೆನ್ನಾಗಿರುತ್ತದೆ ಎಂಬ ಕಾರಣಕ್ಕೆ ಅವರು 'ಸೋಷಿಯಲ್ ಡೆಮೋಕ್ರಾಟ್' ಎಂಬ ಪದವನ್ನು ಬಳಸುತ್ತಾರೆ. ಇದು ನಮ್ಮ ದೇಶಕ್ಕೆ ಇರುವ ಅತಿ ದೊಡ್ಡ ಬೆದರಿಕೆ ಎಂದು ನಾನು ಭಾವಿಸುತ್ತೇನೆ. ಇದು ಮೂಲತಃ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಕಮ್ಯುನಿಸಂ ಅನ್ನು ಪರಿಚಯಿಸುವ ಪ್ರಯತ್ನವಾಗಿದೆ. ಇಷ್ಟೊಂದು ಅಪಾಯಕಾರಿಯಾದದ್ದು ಹಿಂದೆಂದೂ ಇರಲಿಲ್ಲ" ಎಂದು ಹೇಳಿದ್ದಾರೆ.

ನ್ಯೂಯಾರ್ಕ್ ನಗರದ ಮೇಯರ್ ಅಭ್ಯರ್ಥಿ ಝೊಹ್ರಾನ್ ಮಮ್ದಾನಿ ಸೇರಿದಂತೆ ಡೆಮಾಕ್ರಟಿಕ್ ಸೋಷಿಯಲಿಸ್ಟ್ ಅಭ್ಯರ್ಥಿಗಳನ್ನು ಟ್ರಂಪ್ ಪದೇ ಪದೇ ಟೀಕಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News