×
Ad

ಖತರ್‌ ನಲ್ಲಿ ಮಾತುಕತೆ ಖಚಿತವಾಗಿಲ್ಲ: ಇರಾನ್

Update: 2026-06-29 20:47 IST

Photo Credit : X 

ವಾಷಿಂಗ್ಟನ್, ಜೂ. 29: ಕೊಲ್ಲಿ ರಾಷ್ಟ್ರವಾದ ಖತರ್‌ ನಲ್ಲಿ ಮಂಗಳವಾರ ನಡೆಯಲಿರುವ ಸಭೆಗೆ ಇರಾನ್ ವಿನಂತಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

"ಇರಾನ್ ಸಭೆಗೆ ವಿನಂತಿಸಿದೆ. ನಾಳೆ ದೋಹಾದಲ್ಲಿ ಸಭೆ ನಡೆಯಲಿದೆ" ಎಂದು ಟ್ರಂಪ್ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಆದರೆ, ಈ ವಾರ ಯಾವುದೇ ತಾಂತ್ರಿಕ ಸಭೆಗಳನ್ನು ಯೋಜಿಸಲಾಗಿಲ್ಲ. ದೋಹಾದಲ್ಲಿ ತಾಂತ್ರಿಕ ಕಾರ್ಯನಿರತ ಗುಂಪಿನ ಮಾತುಕತೆಗಳು ಇನ್ನೂ ಖಚಿತವಾಗಿಲ್ಲ ಎಂದು ಇರಾನ್‌ ನ ಸಹಾಯಕ ಉಪ ವಿದೇಶಾಂಗ ಸಚಿವ ಕಾಜೆಮ್ ಘರಿಬಾಬಾದಿ ಹೇಳಿರುವುದಾಗಿ ಇರಾನ್‌ ನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಅವರು ಶುಕ್ರವಾರ ಕೊನೆಗೊಳ್ಳುವ ಇರಾನ್‌ ನ ವಾರವನ್ನು ಉಲ್ಲೇಖಿಸಿ ಈ ಮಾತು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News