ಹಾರ್ಮುಝ್‍ನಲ್ಲಿ ಸಾವಿರಕ್ಕೂ ಹೆಚ್ಚು ನೌಕೆಗಳಿಗೆ ಬೆಂಗಾವಲು : ಡೊನಾಲ್ಡ್ ಟ್ರಂಪ್ ಹೇಳಿಕೆ
Update: 2026-08-23 22:09 IST
ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್: ಆಯಕಟ್ಟಿನ ಹಾರ್ಮುಝ್ ಜಲಸಂಧಿಯನ್ನು ಅಮೆರಿಕದ ಹೊಸ ಭೂಭಾಗ ಎಂದು ಬರೆದಿರುವ ಚಿತ್ರವನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, ಅಮೆರಿಕವು ಈ ಜಲಸಂಧಿಯ ಮೂಲಕ 1,000ಕ್ಕೂ ಹೆಚ್ಚು ಹಡಗುಗಳಿಗೆ ಬೆಂಗಾವಲು ಒದಗಿಸಿದೆ ಎಂದು ಪ್ರತಿಪಾದಿಸಿದ್ದಾರೆ.
ಅಮೆರಿಕವು ಈಗ ಜಲಮಾರ್ಗದ ಮೂಲಕ 1,000 ಕ್ಕೂ ಹೆಚ್ಚು ಹಡಗುಗಳನ್ನು ಸುರಕ್ಷಿತವಾಗಿ ಕರೆದೊಯ್ದಿದೆ ಮತ್ತು ಶನಿವಾರ ಒಂದೇ ದಿನ 16 ದಶಲಕ್ಷ ಬ್ಯಾರಲ್ ತೈಲವು ಈ ಜಲಸಂಧಿಯ ಮೂಲಕ ಹಾದುಹೋಗಿದೆ ಎಂದು ಟ್ರಂಪ್ ಹೇಳಿದ್ದಾರೆ.