75 ದೇಶಗಳ ಮೇಲಿನ ವೀಸಾ ನಿಷೇಧ ರದ್ದು : ಟ್ರಂಪ್ ವಲಸೆ ತಡೆ ಕ್ರಮಕ್ಕೆ ತೀವ್ರ ಹಿನ್ನಡೆ
Update: 2026-08-23 09:13 IST
ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್: ಅಮೆರಿಕದ ಫೆಡರಲ್ ನ್ಯಾಯಾಧೀಶರು ಶುಕ್ರವಾರ 75 ದೇಶಗಳ ಪ್ರಜೆಗಳ ಮೇಲಿನ ವೀಸಾ ನಿಷೇಧವನ್ನು ರದ್ದುಗೊಳಿಸಿದ್ದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ತಡೆ ಕ್ರಮಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ.
ಈ ನಿಷೇಧವು ಅಫ್ಘಾನಿಸ್ತಾನ, ಬ್ರೆಜಿಲ್, ಈಜಿಪ್ಟ್, ಇರಾನ್, ಇರಾಕ್, ನೈಜೀರಿಯಾ, ಸೊಮಾಲಿಯಾ, ಥೈಲ್ಯಾಂಡ್ ಮತ್ತು ಯೆಮನ್ ಸೇರಿದಂತೆ 75 ದೇಶಗಳ ಪ್ರಜೆಗಳು ಅಮೆರಿಕದಲ್ಲಿ ಖಾಯಂ ಆಗಿ ನೆಲೆಸುವುದನ್ನು ತಡೆಯುವ ಉದ್ದೇಶವನ್ನು ಹೊಂದಿತ್ತು.
ಈ ನೀತಿ ಕಾನೂನಿಗೆ ವಿರುದ್ಧವಾಗಿದೆ ಹಾಗೂ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಇದನ್ನು ಜಾರಿಗೆ ತರುವಲ್ಲಿ ತಮ್ಮ ಶಾಸನಬದ್ಧ ಅಧಿಕಾರವನ್ನು ಮೀರಿದ್ದಾರೆ ಎಂದು ನ್ಯೂಯಾರ್ಕ್‍ನ ದಕ್ಷಿಣ ಜಿಲ್ಲಾ ನ್ಯಾಯಾಧೀಶೆ ಜೀನೆಟ್ ವರ್ಗಾಸ್ ಹೇಳಿದ್ದಾರೆ.