Photo: Middle East Eye

ರಿಯಾದ್‌: ಸೌದಿ ಅರೇಬಿಯಾದ ಪೂರ್ವ ಪ್ರಾಂತ್ಯದ ಮೇಲೆ ಹಾರಿಬಂದ ಮೂರು ಡ್ರೋನ್‌ ಗಳನ್ನು ಸೌದಿ ನೇತೃತ್ವದ ಒಕ್ಕೂಟ ಪಡೆಗಳು ಕೇವಲ ಮೂರು ಗಂಟೆಗಳ ಅಂತರದಲ್ಲಿ ಹೊಡೆದುರುಳಿಸಿವೆ ಎಂದು ಒಕ್ಕೂಟ ತಿಳಿಸಿದೆ Aljazeera ವರದಿ ಮಾಡಿದೆ.

ಯೆಮೆನ್‌ ನ ಹೂತಿಗಳ ವಿರುದ್ಧ ಹೋರಾಡುತ್ತಿರುವ ಸೌದಿ ಬೆಂಬಲಿತ ಒಕ್ಕೂಟದ ವಕ್ತಾರ ಕರ್ನಲ್ ತುರ್ಕಿ ಅಲ್‌-ಮಲ್ಕಿ ಈ ಕುರಿತು ಮಾಹಿತಿ ನೀಡಿದ್ದಾರೆ. ಪೂರ್ವ ಪ್ರಾಂತ್ಯದ ಮೇಲೆ ಹಾರುತ್ತಿದ್ದ ಮತ್ತೊಂದು ಡ್ರೋನ್ ಅನ್ನು ಪಡೆಗಳು ತಡೆದು ನಾಶಪಡಿಸಿವೆ ಎಂದು ಅವರು ತಿಳಿಸಿದ್ದಾರೆ.

ಕಳೆದ ಮೂರು ಗಂಟೆಗಳಲ್ಲಿ ಈ ಪ್ರದೇಶದಲ್ಲಿ ಹೊಡೆದುರುಳಿಸಲಾದ ಮೂರನೇ ಡ್ರೋನ್ ಇದಾಗಿದೆ. ಇದೇ ಅವಧಿಯಲ್ಲಿ ರಿಯಾದ್‌ನತ್ತ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಲಾಗಿದೆ ಎಂದು ಒಕ್ಕೂಟ ಹೇಳಿಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Contributor - ಇರ್ಷಾದ್ ಎಂ. ವೇಣೂರು

contributor