ವೊಲೊಡಿಮಿರ್ ಝೆಲೆನ್‌ಸ್ಕಿ | Photo Credit ; PTI 

ಕೀವ್, ನ.14: ಅಬುದಾಬಿಯಲ್ಲಿ ನಡೆದ ರಷ್ಯಾ-ಉಕ್ರೇನ್ ಶಾಂತಿ ಮಾತುಕತೆಯ ಬೆನ್ನಲ್ಲೇ ಪೂರ್ವ ಉಕ್ರೇನ್ ನ ಡೊನ್ಬಾಸ್ ಪ್ರದೇಶದಿಂದ ಉಳಿದಿರುವ ಸೇನೆಯನ್ನು ಹಿಂಪಡೆದರೆ, ಉಕ್ರೇನ್‌ ಗೆ NATO ಸದಸ್ಯತ್ವ ನೀಡುವ ಸಾಧ್ಯತೆಯ ಬಗ್ಗೆ ಅಮೆರಿಕದ ಸಂಧಾನಕಾರರು ಪ್ರಸ್ತಾಪಿಸಿರುವುದಾಗಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶನಿವಾರ ಬಹಿರಂಗಪಡಿಸಿದ್ದಾರೆ.

ಉಕ್ರೇನ್ ಯಾವುದೇ ಭೂಪ್ರದೇಶವನ್ನು ಬಿಟ್ಟುಕೊಡಲು ಸಿದ್ಧವಿಲ್ಲವೆಂದು ಝೆಲೆನ್ಸ್ಕಿ ಸ್ಪಷ್ಟಪಡಿಸಿದ್ದಾರೆ. ಆದರೆ, ಅಮೆರಿಕ ಮತ್ತು NATO ಮಿತ್ರರಾಷ್ಟ್ರಗಳು ದೃಢವಾದ ಭದ್ರತಾ ಖಾತರಿ, ಬಲಿಷ್ಠ ಸೇನೆ ಹಾಗೂ ರಾಷ್ಟ್ರದ ಪುನರ್ನಿರ್ಮಾಣಕ್ಕೆ ಅಗತ್ಯವಾದ ಆರ್ಥಿಕ ನೆರವು ನೀಡಿದರೆ, ಈ ವಿಷಯವನ್ನು ಜನಮತಗಣನೆಗೆ ಹಾಕುವುದಾಗಿ ಅವರು ತಿಳಿಸಿದ್ದಾರೆ.

ಸ್ಟೀವ್ ವಿಟ್ಕಾಫ್ ಹಾಗೂ ಜಾರೆಡ್ ಕುಶ್ನರ್ ನೇತೃತ್ವದಲ್ಲಿ ನಡೆದ ಮಾತುಕತೆಯಲ್ಲಿ ಕೈದಿಗಳ ವಿನಿಮಯದ ವಿಷಯದಲ್ಲಿ ಪ್ರಗತಿಯಾಗಿದ್ದರೂ, ಭೂಪ್ರದೇಶ ಹಾಗೂ ಯುದ್ಧಾನಂತರದ ಭದ್ರತಾ ಖಾತರಿಯ ವಿಷಯದಲ್ಲಿ ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯ ಮುಂದುವರಿದಿದೆ.

ರಷ್ಯಾ ಅಕ್ರಮಿಸಿಕೊಂಡಿರುವ ಉಕ್ರೇನ್ ನ ಪ್ರದೇಶಗಳನ್ನು ರಷ್ಯಾದ ಭಾಗವೆಂದು ಕಾನೂನುಬದ್ಧವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ನಂಬಲು ಸಾಧ್ಯವಿಲ್ಲವೆಂದು ಝೆಲೆನ್ಸ್ಕಿ ಸ್ಪಷ್ಟಪಡಿಸಿದ್ದಾರೆ. ಕನಿಷ್ಠ ಪಕ್ಷ, NATO ಒಪ್ಪಂದದ ಆರ್ಟಿಕಲ್ 5ರ ಮಾದರಿಯ ಭದ್ರತಾ ರಕ್ಷಣೆ ಉಕ್ರೇನ್‌ ಗೆ ಅಗತ್ಯವಿದೆಯೆಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor