ಸಾಂದರ್ಭಿಕ ಚಿತ್ರ | Photo Credit: chatgpt AI

ಬರ್ಲಿನ್: ಸೋಮವಾರ ಜರ್ಮನಿಯಾದ್ಯಂತ 450ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್‍ಗಳು ಬಂದಿದ್ದು, ಶಾಲಾ ಆವರಣಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವರದಿಗಳ ಪ್ರಕಾರ, ಈ ಬೆದರಿಕೆ ಇ-ಮೇಲ್‍ಗಳಲ್ಲಿ `ನಿಮಗೆ ಸಾವು ಕಾದಿದೆ' ಎಂದು ಬರೆಯಲಾಗಿತ್ತು.

ನೈಋತ್ಯ ರಾಜ್ಯವಾದ ಬಾಡೆನ್-ವುಟೆರ್ಂಬರ್ಗ್, ಪೂರ್ವ ರಾಜ್ಯವಾದ ಥುರಿಂಗಿಯಾದ ಶಾಲೆಗಳಿಗೆ ಈ ಬೆದರಿಕೆ ಸಂದೇಶಗಳನ್ನು ಕಳುಹಿಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಹಲವು ಶಾಲೆಗಳು ತರಗತಿಗಳನ್ನು ಸ್ಥಗಿತಗೊಳಿಸಿದೆ. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಿದೆ. ಎಲ್ಲಾ ಇ-ಮೇಲ್‍ಗಳಲ್ಲಿ ಒಂದೇ ರೀತಿಯ ಪದಬಳಕೆ ಇದ್ದು, ಇವು ಹುಸಿ ಬೆದರಿಕೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಕೃಷ್ಣ ಮೂರ್ತಿ , ವಾರ್ತಾಭಾರತಿ

contributor