×
Ad

ಇರಾನ್ ಜೊತೆ ಒಪ್ಪಂದವೇರ್ಪಡಿಸುವಾಗ ಗಲ್ಫ್ ಮಿತ್ರರಾಷ್ಟ್ರಗಳ ಹಿತಾಸಕ್ತಿ ಪರಿಗಣನೆ : ಮಾರ್ಕೊ ರೂಬಿಯೊ ಭರವಸೆ

Update: 2026-06-25 22:05 IST

Photo Credit : thehindu.com

ವಾಶಿಂಗ್ಟನ್,ಜೂ.25: ಇರಾನ್ ಜೊತೆ ಏರ್ಪಡಿಸಿಕೊಳ್ಳುವ ಯಾವುದೇ ಒಪ್ಪಂದವು ಗಲ್ಫ್ ಆರಬ್ ಮಿತ್ರರ ಹಿತಾಸಕ್ತಿಗಳನ್ನು ಕೂಡಾ ಪರಿಗಣನೆಗೆ ತೆಗೆದುಕೊಳ್ಳಲಿದೆಯೆಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಗುರುವಾರ ತಿಳಿಸಿದ್ದಾರೆ.

ಬಹರೈನ್‌ನಲ್ಲಿ ಗಲ್ಫ್ ಆರಬ್ ವಿದೇಶಾಂಗ ಸಚಿವರು ಹಾಗೂ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಮೆರಿಕವು ತನ್ನ ದೀರ್ಘ ಕಾಲದ ವೈರಿ ಇರಾನ್‌ನಿಂದ ಶಾಶ್ವತ ಶಾಂತಿಯನ್ನು ಬಯಸುತ್ತದೆ. ಆದರೆ ಇದಕ್ಕಾಗಿ ತೈಲ ಸಮೃದ್ಧ ಗಲ್ಫ್ ಪ್ರದೇಶದ ಆರಬ್ ಮಿತ್ರರ ಭದ್ರತೆ ಹಾಗೂ ಪ್ರಗತಿಯನ್ನು ದುರ್ಬಲಗೊಳಿಸುವುದಿಲ್ಲವೆಂದು ಭರವಸೆ ನೀಡಿದರು. ಈ ಒಪ್ಪಂದದಲ್ಲಿ ಅಮೆರಿಕವು ಇರಾನ್‌ನೊಂದಿಗೆ ಅತ್ಯಂತ ಮೃದುಧೋರಣೆಯ್ನು ತಾಳಿದೆ ಎಂದು ಗಲ್ಫ್ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ.

ಸಭೆಯ ಅಧ್ಯಕ್ಷತೆ ವಹಿಸಿದ್ದ ಬಹರೈನ್‌ನ ವಿದೇಶಾಂಗ ಸಚಿವ ಅಬ್ದುಲ್ಲತೀಫ್ ಅಲ್ ಝಾಯಾನಿ ಅವರು, ಹಾರ್ಮುಝ್ ಜಲಸಂಧಿಯ ಮೂಲಕ ನೌಕೆಗಳ ಸುರಕ್ಷಿತ ಸಂಚಾರಕ್ಕೆ ಕಾರಿಡಾರ್ ತೆರೆಯಲಾಗುವುದೆಂಬ ಒಮಾನ್‌ ಸರಕಾರದ ಘೋಷಣೆಯನ್ನು ಸ್ವಾಗತಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News