ಬ್ಯಾಂಕ್ ಆಫ್ ಇಂಡಿಯಾಗೆ ಹಣ ಪಾವತಿಸಲು ನೀರವ್ ಮೋದಿ ಬಾಧ್ಯಸ್ಥ : ಲಂಡನ್ ಹೈಕೋರ್ಟ್ ತೀರ್ಪು
Update: 2026-06-24 20:54 IST
ನೀರವ್ ಮೋದಿ | Photo Credit : PTI
ಲಂಡನ್, ಜೂ.24: ದೇಶ ಭ್ರಷ್ಟ ವಜ್ರದ ಉದ್ಯಮಿ ನೀರವ್ ಮೋದಿ ತಮ್ಮ ಕಂಪೆನಿಯೊಂದಕ್ಕೆ ಪಡೆದಿದ್ದ ಸಾಲಕ್ಕೆ ನೀಡಿದ ವೈಯಕ್ತಿಕ ಗ್ಯಾರಂಟಿ ಅಡಿಯಲ್ಲಿ ಬ್ಯಾಂಕ್ ಆಫ್ ಇಂಡಿಯಾಗೆ 10.7 ಮಿಲಿಯನ್ ಡಾಲರ್ (100 ಕೋಟಿ ರೂ.ಗೂ ಹೆಚ್ಚು) ಪಾವತಿಸಲು ಬಾಧ್ಯಸ್ಥರಾಗಿದ್ದಾರೆ ಎಂದು ಲಂಡನ್ ಹೈಕೋರ್ಟ್ ತೀರ್ಪು ನೀಡಿದೆ.
ಬ್ಯಾಂಕಿಗೆ ಬಾಕಿ ಇರುವ 4.1 ಮಿಲಿಯನ್ ಡಾಲರ್ (ಸುಮಾರು 38.9 ಕೋಟಿ ರೂ.) ಅಸಲು ಮೊತ್ತಕ್ಕೆ ಮೋದಿ ವೈಯಕ್ತಿಕ ಗ್ಯಾರಂಟಿ ಅಡಿಯಲ್ಲಿ ಜವಾಬ್ದಾರರಾಗಿದ್ದಾರೆ. ಇದರೊಂದಿಗೆ ಬ್ಯಾಂಕ್ ನಿಗದಿಪಡಿಸಿದ ಆಧಾರದ ಮೇಲೆ ಲೆಕ್ಕಹಾಕಿದ ಬಡ್ಡಿಯನ್ನು ಸಹ ಸೇರಿಸಬೇಕಾಗುತ್ತದೆ ಎಂದು ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಸೈಮನ್ ಟಿಂಕ್ಲರ್ ತಿಳಿಸಿದರು.
ಲಂಡನ್ ಜೈಲಿನಲ್ಲಿರುವ ಮೋದಿಯನ್ನು ಹಸ್ತಾಂತರ ಮಾಡುವಂತೆ ಭಾರತ ಆಗ್ರಹಿಸಿದೆ.