ಪಾಕಿಸ್ತಾನದಲ್ಲಿರುವ ಹಿಂದೂಗಳು ಭಾರತಕ್ಕೆ ತೆರಳಲು ಬಯಸುವುದಿಲ್ಲ: ಆಸಿಫ್ ಅಲಿ ಜರ್ದಾರಿ

Update: 2026-08-15 21:13 IST

ಆಸಿಫ್ ಅಲಿ ಜರ್ದಾರಿ | Photo Credit : FACEBOOK 

ಇಸ್ಲಮಾಬಾದ್, ಆ.15: ಪಾಕಿಸ್ತಾನದಲ್ಲಿರುವ ಹಿಂದೂಗಳು ಭಾರತಕ್ಕೆ ತೆರಳುವುದಕ್ಕಿಂತ ಪಾಕಿಸ್ತಾನದಲ್ಲೇ ಉಳಿಯಲು ಇಷ್ಟಪಡುತ್ತಾರೆ ಎಂದು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಪ್ರತಿಪಾದಿಸಿದ್ದಾರೆ.

ಆಗಸ್ಟ್ 14ರಂದು ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಜರ್ದಾರಿ `ಪಾಕಿಸ್ತಾನಿಗಳು ಮತ್ತು ಭಾರತೀಯರ ಚಿಂತನೆಗಳು ವಿಭಿನ್ನವಾಗಿವೆ. ಪಾಕಿಸ್ತಾನದಲ್ಲಿರುವ ಹಿಂದೂಗಳು ತಮ್ಮ ಧರ್ಮವನ್ನು ಆಚರಿಸಲು ಸಂಪೂರ್ಣ ಸ್ವತಂತ್ರರಾಗಿದ್ದಾರೆ . ಭಾರತೀಯರು ಅಖಂಡ ಭಾರತವನ್ನು ನಂಬುತ್ತಾರೆ. ಆದರೆ ನಾವು ಸಹಿಷ್ಣುತೆಯ ಮನೋಭಾವ ಹೊಂದಿರುವ ಮುಸ್ಲಿಮರು. ಪಾಕಿಸ್ತಾನದಲ್ಲಿ ಶೇ. 4 ರಷ್ಟು ಹಿಂದೂ ಜನಸಂಖ್ಯೆಯಿದೆ. ಅವರು ಬೇರೆಲ್ಲೇ ಇರುವುದಕ್ಕಿಂತ ಇಲ್ಲೇ ಅತ್ಯಂತ ಸ್ವತಂತ್ರರಾಗಿದ್ದಾರೆ. ಅವರು ಭಾರತಕ್ಕೆ ಹೋಗುವುದಕ್ಕಿಂತ ನಮ್ಮೊಂದಿಗಿರಲು ಬಯಸುತ್ತಾರೆ' ಎಂದು ಪ್ರತಿಪಾದಿಸಿದ್ದಾರೆ.

ಬ್ರಿಟಿಷ್ ಭಾರತದ ವಿಭಜನೆಯ ಮೂಲಕ ರಚನೆಯಾದ ಪಾಕಿಸ್ತಾನವು, ಭಾರತಕ್ಕಿಂತ ಒಂದು ದಿನ ಮುಂಚಿತವಾಗಿ ತನ್ನ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News