‌Photo credit: tehrantimes.com

ಟೆಹರಾನ್: ಹಾರ್ಮುಝ್‌ ಜಲಸಂಧಿಯಲ್ಲಿ ಮಾನವರಹಿತ ಅಮೆರಿಕದ ಜಲಾಂತರ್ಗಾಮಿ ನೌಕೆಯೊಂದನ್ನು ವಶಪಡಿಸಿಕೊಂಡಿರುವುದಾಗಿ ಇರಾನ್‍ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾಪ್ರ್ಸ್ (IRGC) ತಿಳಿಸಿದೆ.

“ಅಮೆರಿಕದ ‘ಭಯೋತ್ಪಾದಕ ಸೇನೆ’ಯ ಅತ್ಯಾಧುನಿಕ, ಮಾನವರಹಿತ ಮತ್ತು ಸ್ಮಾರ್ಟ್ ಜಲಾಂತರ್ಗಾಮಿ ನೌಕೆಯೊಂದನ್ನು ಕಾರ್ಯಾಚರಣೆ ಮೂಲಕ IRGC ನೌಕಾಪಡೆ ವಶಪಡಿಸಿಕೊಂಡಿದೆ ಎಂದು” ಐಆರ್‌ಜಿಸಿ ಸರಕಾರಿ ದೂರದರ್ಶನದಲ್ಲಿ ಪ್ರಸಾರವಾದ ಹೇಳಿಕೆಯಲ್ಲಿ ತಿಳಿಸಿದೆ.

ವಶಪಡಿಸಿಕೊಂಡ ಅಮೆರಿಕದ ನೌಕೆಗೆ ಸಂಬಂಧಿಸಿದ ಫೊಟೋಗಳು, ವಿಡಿಯೊ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕೂಡ IRGC ಹೇಳಿದೆ.

ಈ ಬೆಳವಣಿಗೆ ಕುರಿತು ಅಮೆರಿಕ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor