ಫ್ರಾನ್ಸ್ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿಗೆ ಇರಾನ್ ನಿರ್ಬಂಧ

Update: 2026-08-17 21:53 IST

ಸಾಂದರ್ಭಿಕ ಚಿತ್ರ | Photo Credit : PTI

ಟೆಹರಾನ್, ಆ.17: ರಾಜತಾಂತ್ರಿಕ ವಿವಾದದಲ್ಲಿ ಭಾಗಿಯಾಗಿದ್ದ ಫ್ರಾನ್ಸ್ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿಗಳನ್ನು ಮತ್ತೆ ಇರಾನ್‌ಗೆ ಬರಲು ಅನುಮತಿಸಲಾಗುವುದಿಲ್ಲ ಎಂದು ಇರಾನ್ ಸೋಮವಾರ ತಿಳಿಸಿದೆ.

ಈ ಇಬ್ಬರು ಸಿಬ್ಬಂದಿಗಳು ಇರಾನ್‌ನ ನಾಗರಿಕ ಸಮಾಜವನ್ನು ಬೆಂಬಲಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ರಾಯಭಾರ ದೂತಾವಾಸಗಳ ನಿಯಮಗಳನ್ನು ವ್ಯಾಖ್ಯಾನಿಸುವ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯೀಲ್ ಬಗಾಯಿ ಹೇಳಿದ್ದಾರೆ.

`ರಾಯಭಾರ ಕಚೇರಿಯ ಈ ಇಬ್ಬರು ನೌಕರರ ಮುಖ್ಯ ಉದ್ದೇಶ ಇರಾನ್ನ ನಾಗರಿಕ ಸಮಾಜ, ವಿದ್ಯಾರ್ಥಿಗಳು ಮತ್ತು ಕಲಾವಿದರನ್ನು ಬೆಂಬಲಿಸುವ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವುದಾಗಿತ್ತು. ಇರಾನ್‌ನ ನಾಗರಿಕ ಸಮಾಜಕ್ಕಾಗಿ ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಕೆಲಸ ಮಾಡುವ ದೇಶಗಳಲ್ಲಿ ಫ್ರಾನ್ಸ್ ಒಂದಾಗಿದೆ ' ಎಂದು ಕಳೆದ ತಿಂಗಳು ಫ್ರಾನ್ಸ್ ವಿದೇಶಾಂಗ ಸಚಿವ ಜಾನ್-ನೋಯೆಲ್ ಬಾರೋ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News