ತಿಳುವಳಿಕಾ ಪತ್ರವನ್ನು ಜಾರಿಗೆ ಅಮೆರಿಕಕ್ಕೆ ಗಡುವು ನೀಡಿದ ಇರಾನ್

Update: 2026-08-17 21:59 IST

Photo : AI

ಟೆಹರಾನ್, ಆ.17: ಉಭಯ ದೇಶಗಳ ನಡುವಿನ ತಿಳುವಳಿಕಾ ಪತ್ರವನ್ನು (ಎಂಒಯು) ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಇರಾನ್ ಸೋಮವಾರ ಅಮೆರಿಕಕ್ಕೆ ಗಡುವು ವಿಧಿಸಿದ್ದು, ರಾಜತಾಂತ್ರಿಕ ಪ್ರಕ್ರಿಯೆ ವಿಫಲವಾದರೆ ಹಾರ್ಮುಝ್ ಜಲಸಂಧಿ ಮತ್ತು ಇಡೀ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಲಿದೆ ಎಂದು ಎಚ್ಚರಿಸಿದೆ.

ಅಮೆರಿಕ ಎಂಒಯು ಅನ್ನು ಸಂಪೂರ್ಣವಾಗಿ ಜಾರಿಗೆ ತರಲು ಸಮಯದ ಮಿತಿಯನ್ನು ನಿಗದಿಪಡಿಸಲಾಗಿದೆ ಮತ್ತು ಅದನ್ನು ಅವರಿಗೆ ತಿಳಿಸಲಾಗಿದೆ. ಇರಾನ್ನ ಬಂದರುಗಳ ಮೇಲಿನ ಅಮೆರಿಕದ ನೌಕಾ ದಿಗ್ಬಂಧನ ಶಾಶ್ವತವಾಗಿ ಮುಂದುವರಿಯಲು ಬಿಡುವುದಿಲ್ಲ. ರಾಜತಾಂತ್ರಿಕತೆ ವಿಫಲವಾದರೆ ದೇಶವು ತನ್ನ ನೀತಿಯನ್ನು ರಕ್ಷಣಾತ್ಮಕ ಹಂತದಿಂದ ಸಂಪೂರ್ಣ ಆಕ್ರಮಣಕಾರಿ ಹಂತಕ್ಕೆ ಬದಲಾಯಿಸುತ್ತದೆ ಎಂದು ಹಿರಿಯ ಇರಾನ್ ಅಧಿಕಾರಿಯೊಬ್ಬರು ಸೋಮವಾರ ಹೇಳಿರುವುದಾಗಿ ರಾಯ್ಟರ್ಸ್ ವರದಿ ಮಾಡಿದೆ.

ಈ ಮಧ್ಯೆ, ಕೆಂಪು ಸಮುದ್ರದಲ್ಲಿ ಸೌದಿ ಸೇನೆಯ ಹಡಗು ಮತ್ತು ನಾಲ್ಕು ಬೆಂಗಾವಲು ನೌಕೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದಾಗಿ ಹೌದಿ ಗುಂಪಿನ ವಕ್ತಾರ ಯಾಹ್ಯಾ ಸಾರಿ ಸೋಮವಾರ ಟೆಲಿಗ್ರಾಂನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News