×
Ad

ಇರಾನ್ ವಿರುದ್ಧ ಇಸ್ರೇಲ್‌ನ ಅಭಿಯಾನ ಇನ್ನೂ ಮುಗಿದಿಲ್ಲ: ನೆತನ್ಯಾಹು

Update: 2026-06-23 22:28 IST

 ಬೆಂಜಮಿನ್ ನೆತನ್ಯಾಹು | Photo Credit : PTI 

ಟೆಲ್ ಅವೀವ್, ಜೂ.23: ಅಮೆರಿಕದ ಮೇಲಿನ ತನ್ನ ಮಿಲಿಟರಿ ಅವಲಂಬನೆಯನ್ನು ಇಸ್ರೇಲ್ ಕೊನೆಗಾಣಿಸಬೇಕು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ಹೇಳಿದ್ದಾರೆ.

‘ಇರಾನ್ ಮತ್ತು ಅದರ ಮಿತ್ರ ಗುಂಪುಗಳನ್ನು ಎದುರಿಸಲು ಇಸ್ರೇಲ್ ತನ್ನದೇ ಆದ ಆಯುಧ ಉತ್ಪಾದನಾ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿಕೊಳ್ಳುವ ಅಗತ್ಯವಿದೆ. ನಮ್ಮ ಅಮೆರಿಕನ್ ಮಿತ್ರರಿಂದ ನಮಗೆ ದೊರೆತ ಮತ್ತು ಇಷ್ಟು ವರ್ಷಗಳಲ್ಲಿ ನಾನು ಪಡೆದುಕೊಂಡ ಬೆಂಬಲವನ್ನು ನಾನು ಪ್ರೀತಿಯಿಂದ ಗೌರವಿಸುತ್ತೇನೆ. ಆದರೆ ನಮಗೆ ನಮ್ಮದೇ ಆದ ಸ್ವತಂತ್ರ ಆಯುಧ ಉತ್ಪಾದನಾ ವ್ಯವಸ್ಥೆಯ ಅಗತ್ಯವಿದೆ. ನಾವು ನಮ್ಮದೇ ಆದ ಶಸ್ತ್ರಾಸ್ತ್ರಗಳನ್ನು ತಯಾರಿಸಬೇಕು’ ಎಂದು ನೆತನ್ಯಾಹು ಹೇಳಿರುವುದಾಗಿ ‘ದಿ ಟೈಮ್ಸ್ ಆಫ್ ಇಸ್ರೇಲ್’ ವರದಿ ಮಾಡಿದೆ.

‘ನಾವು ಈಗ ಇರಾನ್ ಮತ್ತು ಅದರ ಮಿತ್ರ ಗುಂಪುಗಳನ್ನು ಎದುರಿಸುತ್ತಿದ್ದೇವೆ. ನಾವು ಅವರ ಮೇಲೆ ತೀವ್ರವಾಗಿ ದಾಳಿ ಮಾಡಿದ್ದೇವೆ. ಇದು ಇನ್ನೂ ಮುಗಿದಿಲ್ಲ. ಆದರೆ ಇದು ನಮ್ಮ ಬಲವನ್ನು ಅವಲಂಬಿಸಿದೆ. ಇನ್ನು 30 ವರ್ಷಗಳ ನಂತರ ನಾವು ಎಲ್ಲಿರುತ್ತೇವೆ ಎಂಬುದು ನಮ್ಮ ಶಕ್ತಿಯನ್ನು ಅವಲಂಬಿಸಿರುತ್ತದೆ. ಅದಕ್ಕಾಗಿಯೇ ನಾವು ಇನ್ನೂ ಹೆಚ್ಚಿನ ಶಕ್ತಿಯನ್ನು ನಿರ್ಮಿಸುವ ಅಗತ್ಯವಿದೆ’ ಎಂದು ನೆತನ್ಯಾಹು ಹೇಳಿದ್ದಾರೆ.

ಈ ಮಧ್ಯೆ, ಟ್ರಂಪ್ ನೇತೃತ್ವದಲ್ಲಿ ಕುದುರಿಸಲಾಗುವ ಯಾವುದೇ ಒಪ್ಪಂದವೂ ಇಸ್ರೇಲ್‌ಗೆ ಬದ್ಧವಾಗಿರುವುದಿಲ್ಲ ಮತ್ತು ದೇಶವು ಸ್ವತಂತ್ರವಾಗಿ ಭದ್ರತಾ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತದೆ.

‘ಇಸ್ರೇಲ್ ಅಮೆರಿಕಕ್ಕೆ ಅಧೀನವಾಗಿಲ್ಲ. ನಾವು ಒಂದು ಸ್ವತಂತ್ರ ಹಾಗೂ ಸಾರ್ವಭೌಮ ರಾಷ್ಟ್ರ’ ಎಂದು ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಚಿವ ಇಟಾಮರ್ ಬೆನ್-ಗ್ವಿರ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News