×
Ad

ಹಾರ್ಮುಝ್ ಜಲಸಂಧಿಗೆ ಜಂಟಿ ಟೋಲ್ : ಗಲ್ಫ್ ದೇಶಗಳಿಗೆ ಇರಾನ್ ಪ್ರಸ್ತಾಪ ; ವರದಿ

Update: 2026-06-26 21:36 IST

ಸಾಂದರ್ಭಿಕ ಚಿತ್ರ | Photo Credit : AP

ಟೆಹರಾನ್, ಜೂ.28: ಹಾರ್ಮುಝ್ ಜಲಸಂಧಿಯ ಮೂಲಕ ಸಂಚರಿಸುವ ಹಡಗುಗಳಿಗೆ ಶುಲ್ಕ ವಿಧಿಸುವ ಯೋಜನೆಯನ್ನು ಇರಾನ್ ಗಲ್ಫ್ ರಾಷ್ಟ್ರಗಳ ಮುಂದಿಟ್ಟಿದೆ. ಈ ಪ್ರಸ್ತಾಪದ ಕುರಿತು ಚೀನಾದೊಂದಿಗೂ ಅದು ಚರ್ಚಿಸುತ್ತಿದ್ದು, ಭದ್ರತೆ, ಸುರಕ್ಷತೆ ಮತ್ತು ಪರಿಸರ ಸೇವೆಗಳಿಗಾಗಿ ಶುಲ್ಕವನ್ನು ವಿಧಿಸುವುದರಿಂದ ಭಾಗವಹಿಸುವ ದೇಶಗಳಿಗೆ ವರ್ಷಕ್ಕೆ ಸುಮಾರು 40 ಶತಕೋಟಿ ಡಾಲರ್ ಆದಾಯ ಬರಬಹುದು ಎಂದು ಅಂದಾಜಿಸಿದೆ.

ತುರ್ಕಿಯು ಏಜಿಯನ್ ಸಮುದ್ರಕ್ಕೆ ಮತ್ತು ಅಲ್ಲಿಂದ ಬರುವ ಹಡಗುಗಳ ಸಂಚಾರಕ್ಕೆ `ಗೋಲ್ಡ್ ಫ್ರಾಂಕ್' ಎಂದು ಕರೆಯಲಾಗುವ ತೆರಿಗೆಯನ್ನು ವಿಧಿಸುವ ಮಾದರಿಯಲ್ಲೇ ಈ ವ್ಯವಸ್ಥೆಯನ್ನು ರೂಪಿಸಲು ಇರಾನ್ ಎದುರು ನೋಡುತ್ತಿದೆ. ಇರಾನ್ ಈ ಪ್ರಸ್ತಾವಿತ ಸೇವಾ-ಶುಲ್ಕ ಕಾರ್ಯವಿಧಾನದ ಬಗ್ಗೆ ಚೀನಾ ಮತ್ತು ಈಜಿಪ್ಟ್ ದೇಶಗಳೊಂದಿಗೂ ಚರ್ಚಿಸಿದೆ. ಭವಿಷ್ಯದಲ್ಲಿ ಅಮೆರಿಕ ಕೂಡ ಇಂತಹ ಪಾವತಿ ವ್ಯವಸ್ಥೆಗೆ ಸೇರ್ಪಡೆಗೊಳ್ಳುವುದನ್ನು ಸ್ವಾಗತಿಸುವುದಾಗಿ ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು `ದಿ ವಾಲ್ ಸ್ಟ್ರೀಟ್ ಜರ್ನಲ್' ವರದಿ ಮಾಡಿದೆ.

ಆದರೆ, ಈ ಪ್ರಸ್ತಾಪಕ್ಕೆ ಅಮೆರಿಕದಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾರ್ಮುಝ್ ಜಲಸಂಧಿಯನ್ನು ಬಳಸುವ ಹಡಗುಗಳ ಮೇಲೆ ಯಾವುದೇ ಟೋಲ್ ಅಥವಾ ಇತರ ಶುಲ್ಕಗಳನ್ನು ವಿಧಿಸುವುದಿಲ್ಲ ಎಂದು ಇರಾನ್ ತಮ್ಮ ಆಡಳಿತಕ್ಕೆ ಭರವಸೆ ನೀಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಕೂಡ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. `ಅಂತರರಾಷ್ಟ್ರೀಯ ಜಲಮಾರ್ಗಗಳ ಬಳಕೆಗೆ ಶುಲ್ಕ ವಿಧಿಸುವ ಹಕ್ಕು ಭೂಮಿಯ ಮೇಲಿನ ಯಾವುದೇ ದೇಶಕ್ಕೂ ಇಲ್ಲ ಮತ್ತು ಯಾವುದೇ ಒಪ್ಪಂದದಲ್ಲೂ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬುದು ನಿಜವಾದ ವಾಸ್ತವ' ಎಂದು ರೂಬಿಯೊ ಅವರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News