Screengrab : X 

ಟೆಹರಾನ್, ನ. 11: ಹಾರ್ಮುಝ್ ಜಲಸಂಧಿಯಲ್ಲಿ ನಿಷೇಧಿತ ಪ್ರದೇಶಕ್ಕೆ ಪ್ರವೇಶಿಸಿದ ತೈಲ ಟ್ಯಾಂಕರ್ ನೌಕಾ ಮೈನ್ಗೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಇರಾನ್ ಸೇನೆ ಬುಧವಾರ ತಿಳಿಸಿದೆ.

ಹಾರ್ಮುಝ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್‌ ಗೆ ಸಂಬಂಧಿಸಿದ ಘಟನೆಯ ವರದಿ ಬಂದಿದೆ. ಸಿಬ್ಬಂದಿಯ ಸ್ಥಿತಿ, ಹಾನಿಯ ಪ್ರಮಾಣ ಮತ್ತು ಪರಿಸರದ ಮೇಲಾದ ಪರಿಣಾಮ ಇನ್ನೂ ತಿಳಿದುಬಂದಿಲ್ಲ ಎಂದು ಬ್ರಿಟನ್ ನ ‘ಕಡಲ ವ್ಯಾಪಾರ ಸಂಘಟನೆ’ ತಿಳಿಸಿದೆ.

ಫೆಬ್ರವರಿ ಕೊನೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾದಾಗಿನಿಂದ ಇರಾನ್ ಈ ಪ್ರಮುಖ ಆಯಕಟ್ಟಿನ ಜಲಮಾರ್ಗದಲ್ಲಿ ಹಡಗು ಸಂಚಾರವನ್ನು ನಿರ್ಬಂಧಿಸಿದೆ ಮತ್ತು ತನ್ನ ಅನುಮತಿಯಿಲ್ಲದೆ ಹಾದುಹೋಗುವ ಹಡಗುಗಳನ್ನು ಗುರಿಯಾಗಿಸುತ್ತಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor