ಪೀಟ್ ಹೆಗ್ಸೆತ್ | Photo : AP , PTI 

ವಾಷಿಂಗ್ಟನ್: ಇರಾನ್ ಯುದ್ಧಕ್ಕೆ ಸಂಬಂಧಿಸಿದಂತೆ ಅಮೆರಿಕ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ವಿರುದ್ಧದ ದೋಷಾರೋಪಣೆ ಪ್ರಯತ್ನಗಳನ್ನು ಟ್ರಂಪ್ ಬೆಂಬಲಿತ ರಿಪಬ್ಲಿಕನ್ನರು ತಡೆಹಿಡಿದಿದ್ದಾರೆ.

ದೋಷಾರೋಪಣೆ ನಿರ್ಣಯಗಳನ್ನು ನ್ಯಾಯಾಂಗ ಸಮಿತಿಗೆ ಒಪ್ಪಿಸಲು ರಿಪಬ್ಲಿಕನ್ ಪಕ್ಷದ ನಿಯಂತ್ರಣದಲ್ಲಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಮತ ಚಲಾಯಿಸಲಾಗಿದೆ.

ಹೆಗ್ಸೆತ್ ಪರವಾಗಿ 211 ಮತಗಳು ಹಾಗೂ ವಿರುದ್ಧವಾಗಿ 204 ಮತಗಳು ಚಲಾವಣೆಗೊಂಡವು. ರಿಪಬ್ಲಿಕನ್ ಪ್ರತಿನಿಧಿ ಥಾಮಸ್ ಮ್ಯಾಸಿ ಎಂಟು ದೋಷಾರೋಪಣೆ ನಿರ್ಣಯಗಳನ್ನು ಮಂಡಿಸಿದ್ದು, ಸದ್ಯ ಅವರಿಗೆ ಹಿನ್ನೆಡೆಯಾಗಿದೆ.

ಜನವರಿವರೆಗೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ ರಿಪಬ್ಲಿಕನ್ ಪಕ್ಷದ ಹಿಡಿತದಲ್ಲಿರಲಿದೆ. ಹೆಗ್ಸೆತ್ ತಕ್ಷಣದ ದೋಷಾರೋಪಣೆ ಪ್ರಕ್ರಿಯೆ ಮತದಾನವಾಗಲಿ ಅಥವಾ ಸೆನೆಟ್ ವಿಚಾರಣೆಯನ್ನು ಎದುರಿಸುವುದಿಲ್ಲ. ಆ ಬಳಿಕ, ಡೆಮಾಕ್ರಟ್‌ಗಳ ನಿಯಂತ್ರಣಕ್ಕೆ ಬರಲಿದೆ. ಆಗ ಪರಿಸ್ಥಿತಿ ಬದಲಾಗುವ ಸಾಧ್ಯತೆಯಿದೆ.

ಕಾನೂನುಬಾಹಿರವಾಗಿ ಯುದ್ಧ ನಡೆಸಿರುವುದು ಹಾಗೂ ಪೆಂಟಗನ್ ಮುಖ್ಯಸ್ಥರಾಗಿ ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಆರೋಪವನ್ನು ಹೆಗ್ಸೆತ್ ಅವರ ಮೇಲೆ ಹೊರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor