×
Ad

ಕೆನಡಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ಅರವಿಂದರ್ ಸಿಂಗ್‌ ನಿವಾಸದ ಮೇಲೆ ಗುಂಡಿನ ದಾಳಿ

Update: 2026-05-21 21:37 IST

 ಅರವಿಂದರ್ ಸಿಂಗ್‌ | Photo Credit : X \ canadiancricket

ಒಟ್ಟಾವ, ಮೇ 21: ಕೆನಡಾ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷ ಅರವಿಂದರ್ ಸಿಂಗ್ ಅವರ ಸರ್ರೆ ನಿವಾಸದ ಮೇಲೆ ಬುಧವಾರ ಬೆಳಿಗ್ಗೆ ಗುಂಡಿನ ದಾಳಿ ನಡೆದಿರುವುದಾಗಿ ಸಿಬಿಎಸ್ ನ್ಯೂಸ್ ವರದಿ ಮಾಡಿದೆ.

ಸರ್ರೆಯ ನ್ಯೂಟೌನ್ ಪ್ರದೇಶದಲ್ಲಿರುವ ತಮ್ಮ ನಿವಾಸದ ಮೇಲೆ ಗುಂಡಿನ ದಾಳಿ ನಡೆದಿರುವುದನ್ನು ಖೋಸಾ ದೃಢಪಡಿಸಿದ್ದಾರೆ. ಬುಧವಾರ ಬೆಳಿಗ್ಗೆ 4:40 ಗಂಟೆಗೆ ಮನೆಯ ಆವರಣಕ್ಕೆ ನುಗ್ಗಿದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಬಾಗಿಲು, ಕಿಟಕಿಗಳಲ್ಲಿ ಬುಲೆಟ್ ಗುರುತುಗಳು ಮೂಡಿವೆ, ಯಾರೂ ಗಾಯಗೊಂಡಿಲ್ಲ. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಗುಂಡಿನ ದಾಳಿ ನಡೆದಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕ್ರಿಕೆಟ್ ಕೆನಡಾ ವಿರುದ್ಧ ಭ್ರಷ್ಟಾಚಾರ, ಸಂಘಟಿತ ಅಪರಾಧ ಪ್ರಭಾವ, ಮ್ಯಾಚ್‍ಫಿಕ್ಸಿಂಗ್ ದೂರುಗಳ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ. ಬ್ರಿಟಿಷ್ ಕೊಲಂಬಿಯಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿಯೂ ಮುಂದುವರಿದಿರುವ ಖೋಸಾ, ಬಿಷ್ಣೋಯಿ ಗ್ಯಾಂಗ್‍ನೊಂದಿಗೆ ಸಂಬಂಧ ಹೊಂದಿರುವ ಸ್ಥಳೀಯ ಆಟಗಾರರ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಆರೋಪವಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News