×
Ad

ಲೆಬನಾನ್‌ ನಲ್ಲಿ ಸೈನಿಕರಿಗೆ ಯಾವುದೇ ನಿರ್ಬಂಧವಿಲ್ಲ: ಇಸ್ರೇಲ್

Update: 2026-06-21 22:14 IST

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Photo: PTI)

ಟೆಲ್ ಅವೀವ್, ಜೂ.21: ದಕ್ಷಿಣ ಲೆಬನಾನ್‌ ನಲ್ಲಿರುವ ಇಸ್ರೇಲ್ ಸೈನಿಕರಿಗೆ ಅಲ್ಲಿನ ಬೆದರಿಕೆಗಳನ್ನು ಮಟ್ಟಹಾಕಲು ‘ಯಾವುದೇ ನಿರ್ಬಂಧಗಳಿಲ್ಲ’ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ರವಿವಾರ ಹೇಳಿದ್ದಾರೆ.

‘ಬೆದರಿಕೆಗಳನ್ನು ತೊಡೆದುಹಾಕಲು ಲೆಬನಾನ್‌ನಲ್ಲಿ ಕಾರ್ಯಾಚರಣೆ ನಡೆಸುವ ಐಡಿಎಫ್ (ಇಸ್ರೇಲ್ ರಕ್ಷಣಾ ಪಡೆ) ಸೈನಿಕರ ಮೇಲೆ ಯಾವುದೇ ನಿರ್ಬಂಧ ಇರಲಿಲ್ಲ ಮತ್ತು ಈಗಲೂ ಇಲ್ಲ. ಐಡಿಎಫ್‌ ನ ಕೈಗಳನ್ನು ಕಟ್ಟಿಹಾಕುವುದಿಲ್ಲ. ಲೆಬನಾನ್ ಅಭಿಯಾನದಲ್ಲಿ ಐಡಿಎಫ್ ಸಾಧಿಸಿದ ಎಲ್ಲಾ ಯಶಸ್ಸುಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗುತ್ತಿದೆ. ಘೋಷಿಸಲಾದ ಕದನ ವಿರಾಮವು ಇಸ್ರೇಲ್‌ನ ಸಮುದಾಯಗಳನ್ನು ರಕ್ಷಿಸುವ ಭದ್ರತಾ ವಲಯದೊಳಗಿನ ಎಲ್ಲಾ ಸ್ಥಾನಗಳಲ್ಲಿ ಐಡಿಎಫ್ ಅನ್ನು ಹಾಗೆಯೇ ಉಳಿಸಿದೆ. ಐಡಿಎಫ್ ಲೆಬನಾನ್‌ನ ಭದ್ರತಾ ವಲಯದಿಂದ ಹಿಂದೆ ಸರಿಯುವುದಿಲ್ಲ’ ಎಂದು ಕಾಟ್ಜ್ ಹೇಳಿರುವುದಾಗಿ ‘ಟೈಮ್ಸ್ ಆಫ್ ಇಸ್ರೇಲ್’ ಪತ್ರಿಕೆ ವರದಿ ಮಾಡಿದೆ.

ಕೊಲ್ಲಿ ವಲಯದ ಯುದ್ಧಕ್ಕೆ ಸಂಬಂಧಿಸಿದ ತಿಳುವಳಿಕಾ ಒಪ್ಪಂದದ ಕುರಿತು ಚರ್ಚಿಸಲು ಅಮೆರಿಕ ಮತ್ತು ಇರಾನ್ ನಿಯೋಗಗಳು ಸ್ವಿಟ್ಜರ್‍ಲ್ಯಾಂಡ್‍ ನಲ್ಲಿ ಸಭೆ ನಡೆಸುತ್ತಿರುವ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News