ಸಾಂದರ್ಭಿಕ ಚಿತ್ರ | Photo Credit : freepik.com

ಝೂರಿಚ್: ರವಿವಾರ ಮುಂಜಾನೆ ಸ್ವಿಝರ್ಲೆಂಡ್ ನ ಆರಾವು ಬಳಿಯ ಶಾಚೆನ್ ನಲ್ಲಿರುವ ಹಾರ್ಸ್‌ ರೇಸ್ ಟ್ರ್ಯಾಕ್ ನಲ್ಲಿ  ಕಾರ್ಯಕ್ರಮವೊಂದರಲ್ಲಿ ಗುಂಡಿನ ದಾಳಿ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ 

ಈ ಘಟನೆಯ ಕುರಿತು ತುರ್ತು ತಂಡಗಳು ಕಾರ್ಯಾಚರಣೆ ಕೈಗೊಂಡಿರುವುದರಿಂದ, ಸ್ಥಳೀಯ ನಿವಾಸಿಗಳು ಹಾಗೂ ಪ್ರವಾಸಿಗರು ಆರಾವು ಶಾಚೆನ್ ಪ್ರದೇಶದಿಂದ ದೂರ ಉಳಿಯಬೇಕು ಎಂದು ಆರ್ಗೌ ಕ್ಯಾಂಟೋನಲ್ ಪೊಲೀಸರು ಮನವಿ ಮಾಡಿದ್ದಾರೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಆರ್ಗೌ ಕ್ಯಾಂಟೋನಲ್ ಪೊಲೀಸರು, “ಶಾಚೆನ್ ನಲ್ಲಿ ಗುಂಡಿನ ದಾಳಿ ನಡೆದಿದೆ. ಹಲವರು ಗಾಯಗೊಂಡಿದ್ದು, ಪೊಲೀಸ್‌ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಈ ಪ್ರದೇಶದಿಂದ ದೂರವಿರಿ. ಮತ್ತಷ್ಟು ಮಾಹಿತಿಯನ್ನು ನೀಡುತ್ತೇವೆ” ಎಂದು ತಿಳಿಸಿದ್ದಾರೆ.

ಸ್ಥಳೀಯ ಕಾಲಮಾನ ರವಿವಾರ ಮುಂಜಾನೆ ಸುಮಾರು 2.30ರ ಬಳಿಕ ಈ ಘಟನೆ ನಡೆದಿದೆ. ಹಾರ್ಸ್‌ ರೇಸ್ ಟ್ರ್ಯಾಕ್ ನಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ನೆರೆದಿದ್ದರು ಎಂದು ಹೇಳಲಾಗಿದೆ. ಗುಂಡಿನ ದಾಳಿ ನಡೆದಾಗ, ‘ರೇವ್ ಪಾರ್ಟಿ’ ನಡೆಯುತ್ತಿತ್ತು ಎಂದು ಸ್ಥಳೀಯ ಪತ್ರಿಕೆ ‘Blick’ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor