ಮಸೌದ್ ಪೆಜೆಶ್ಕಿಯನ್ | Photo Credit : AP

ನ್ಯೂಯಾರ್ಕ್: ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ನಡೆಯುತ್ತಿದ್ದರೂ, ಮುಂದಿನ ವಾರ ನಡೆಯಲಿರುವ ವಿಶ್ವಸಂಸ್ಥೆಯ ಮಹಾಸಭೆಗಾಗಿ ನ್ಯೂಯಾರ್ಕ್‍ಗೆ ಪ್ರಯಾಣಿಸಲು ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯನ್ ಮತ್ತು ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರಿಗೆ ಟ್ರಂಪ್ ಆಡಳಿತವು ವೀಸಾಗಳನ್ನು ನೀಡಿದೆ.

ಅಗತ್ಯ ಸಿಬ್ಬಂದಿಗಳನ್ನೊಳಗೊಂಡ ಇರಾನ್‍ನ ಮುಖ್ಯ ನಿಯೋಗಕ್ಕೆ ಅಮೆರಿಕದ ವಿದೇಶಾಂಗ ಇಲಾಖೆಯು ವೀಸಾಗಳನ್ನು ಅನುಮೋದಿಸಿದೆ. `ಆತಿಥೇಯ ದೇಶವಾಗಿ ನಮ್ಮ ಕರ್ತವ್ಯಗಳಿಗೆ ಬದ್ಧವಾಗಿ, ಇರಾನ್ ಆಡಳಿತದ ಮುಖ್ಯ ನಿಯೋಗವು ವಿಶ್ವಸಂಸ್ಥೆಯ ಮಹಾಸಭೆಯ ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ನಮ್ಮ ನೀತಿಯಂತೆ ಈ ನಿಯೋಗವು ಪ್ರಯಾಣದ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಮತ್ತು ಐಷಾರಾಮಿ ಹಾಗೂ ಇತರ ಸರಕುಗಳ ಖರೀದಿಯ ಮೇಲೆ ನಿಷೇಧವನ್ನು ಎದುರಿಸಲಿದೆ. ಈ ಬಾರಿಯ ನಿಯೋಗವು ಕಳೆದ ವರ್ಷಕ್ಕಿಂತ ಚಿಕ್ಕದಾಗಿದೆ' ಎಂದು ವಿದೇಶಾಂಗ ಇಲಾಖೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor