Photo Credit : X

ವಾಶಿಂಗ್ಟನ್: ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರೊಂದಿಗಿನ ಭೇಟಿಯ ಸಂದರ್ಭ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಂಚೆನ್ ಲಾಮಾ ಅವರ ಬಿಡುಗಡೆಗೆ ಒತ್ತಾಯಿಸಬೇಕು ಮತ್ತು ದಲೈ ಲಾಮಾ ಅವರೊಂದಿಗೆ ಅರ್ಥಪೂರ್ಣ ಮಾತುಕತೆಯನ್ನು ಪುನರಾರಂಭಿಸಲು ಒತ್ತಡ ಹೇರಬೇಕೆಂದು ಟಿಬೆಟಿಯನ್ ಹಕ್ಕುಗಳ ಪರ ಹೋರಾಡುವ ಸಂಘಟನೆಯೊಂದು ಮನವಿ ಮಾಡಿದೆ.

ಅಮೆರಿಕದ ನೀತಿಯು 2002ರ `ಟಿಬೆಟಿಯನ್ ಪಾಲಿಸಿ ಆಕ್ಟ್' ಮತ್ತು 2024 ರ `ರಿಸಾಲ್ವ್ ಟಿಬೆಟ್ ಆಕ್ಟ್' ಆಧಾರದ ಮೇಲೆ ರೂಪುಗೊಂಡಿದೆ ಎಂದು `ಇಂಟರ್‌ನ್ಯಾಷನಲ್ ಕ್ಯಾಂಪೇನ್ ಫಾರ್ ಟಿಬೆಟ್' (ಐಸಿಟಿ) ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಎರಡೂ ಕಾಯ್ದೆಗಳು ಟಿಬೆಟ್-ಚೀನಾ ನಡುವಿನ ವಿವಾದವನ್ನು ಯಾವುದೇ ಪೂರ್ವಾಪೇಕ್ಷಿತಗಳಿಲ್ಲದೆ ಅರ್ಥಪೂರ್ಣ ಮಾತುಕತೆಯ ಮೂಲಕ ಶಾಂತಿಯುತವಾಗಿ ಬಗೆಹರಿಸಬೇಕೆಂದು ಪ್ರತಿಪಾದಿಸುತ್ತವೆ ಎಂದು ಐಸಿಟಿ ಅಧ್ಯಕ್ಷ ತೆಂಚೋ ಗ್ಯಾತ್ಸೊ ಹೇಳಿದ್ದಾರೆ. ಮೇ 14, 1995 ರಂದು ದಲೈ ಲಾಮಾ ಅವರಿಂದ ಗುರುತಿಸಲ್ಪಟ್ಟು, ಮೂರು ದಿನಗಳ ನಂತರ ನಾಪತ್ತೆಯಾದ 11ನೇ ಪಂಚೆನ್ ಲಾಮಾ ಅವರ ಬಿಡುಗಡೆಗೆ ಟ್ರಂಪ್ ಒತ್ತಾಯಿಸಬೇಕೆಂದು ಐಸಿಟಿ ಬಯಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor