ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Photo credit: PTI)

ಹೊಸದಿಲ್ಲಿ: 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೊಸದಿಲ್ಲಿಗೆ ಆಗಮಿಸಿದ್ದಾರೆ. 2019ರ ನಂತರ ಕ್ಸಿ ಜಿನ್‌ಪಿಂಗ್ ಅವರು ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.

ಚೀನಾ ಅಧ್ಯಕ್ಷ ಕ್ಸಿ ಅವರ ನಿಯೋಗದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾ (ಸಿಪಿಸಿ) ಕೇಂದ್ರ ಸಮಿತಿಯ ಪೊಲಿಟ್ಬ್ಯೂರೊ ಸ್ಥಾಯಿ ಸಮಿತಿ ಸದಸ್ಯ ಹಾಗೂ ಸಿಪಿಸಿ ಕೇಂದ್ರ ಸಮಿತಿಯ ಜನರಲ್ ಆಫೀಸ್ ನಿರ್ದೇಶಕ ಕೈ ಕಿ, ಹಾಗೂ ಸಿಪಿಸಿ ಕೇಂದ್ರ ಸಮಿತಿಯ ಪೊಲಿಟ್ಬ್ಯೂರೊ ಸದಸ್ಯ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಉಪಸ್ಥಿತರಿದ್ದಾರೆ ಎಂದು ಚೀನಾದ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿ ಮಾಡುವ ನಿರೀಕ್ಷೆಯಿದೆ.

Xinhua ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಈ ಹಿಂದೆ ಬಿಶ್ಕೆಕ್ ನಲ್ಲಿ ನಡೆದ SCO ಶೃಂಗಸಭೆಯಲ್ಲಿ ಮಂಡಿಸಿದಂತೆಯೇ, ಈ ಬಾರಿಯ ಬ್ರಿಕ್ಸ್ ಶೃಂಗಸಭೆಯಲ್ಲೂ ‘ಗ್ಲೋಬಲ್ ಸೌತ್’ (ಅಭಿವೃದ್ಧಿಶೀಲ ರಾಷ್ಟ್ರಗಳು) ನಡುವಿನ ಸಹಕಾರಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಕ್ಸಿ ಜಿನ್‌ಪಿಂಗ್ ಮಂಡಿಸುವ ನಿರೀಕ್ಷೆಯಿದೆ.

ಬ್ರಿಕ್ಸ್ ಮತ್ತು ಎಸ್ಸಿಒ ಒಕ್ಕೂಟಗಳು ತಮ್ಮ ಸದಸ್ಯತ್ವವನ್ನು ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳ ಪಾಲುದಾರರ ಜಾಲವನ್ನು ವಿಸ್ತರಿಸಿವೆ ಎಂದು ವರದಿ ತಿಳಿಸಿದೆ.

ಈ ಎರಡೂ ಒಕ್ಕೂಟಗಳ ಸದಸ್ಯ ರಾಷ್ಟ್ರಗಳು ಒಟ್ಟಾಗಿ ವಿಶ್ವದ ಅರ್ಧಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹಾಗೂ ಜಾಗತಿಕ ಆರ್ಥಿಕತೆಯ ಸುಮಾರು ಶೇ. 30ರಷ್ಟನ್ನು ಪ್ರತಿನಿಧಿಸುತ್ತವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor