Photo Credit | X.com

ಸನಾ: ಯೆಮೆನ್‌ ನ ಕೆಂಪು ಸಮುದ್ರದ ಕರಾವಳಿಯ ಸಂಪೂರ್ಣ ಪ್ರದೇಶವನ್ನು ಹೌದಿಗಳು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಕೆಂಪು ಸಮುದ್ರದ ಪ್ರಮುಖ ನಗರವಾದ ಮೊಖಾವನ್ನು ಹೌದಿಗಳು ವಶಪಡಿಸಿಕೊಂಡಿದ್ದಾರೆ. ಮೊಖಾ ವಶವಾದ ಬಳಿಕ, ಕೆಂಪು ಸಮುದ್ರದ ಯೆಮೆನ್ ಕರಾವಳಿಯ ಸಂಪೂರ್ಣ ಪ್ರದೇಶ ಹೌದಿಗಳ ನಿಯಂತ್ರಣಕ್ಕೆ ಬಂದಿದೆ. ಇದರೊಂದಿಗೆ, ವಿಶ್ವದ ಪ್ರಮುಖ ವ್ಯಾಪಾರ ಮಾರ್ಗಗಳಲ್ಲಿ ಒಂದಾಗಿರುವ ಬಾಬ್ ಅಲ್-ಮಂಡೇಬ್ ಜಲಸಂಧಿಯ ಮೇಲೂ ಹೌದಿಗಳ ಹಿಡಿತ ವಿಸ್ತರಿಸಿದೆ.

ಈ ನಡುವೆ, ಮೊಖಾ ವಿಮಾನ ನಿಲ್ದಾಣದ ಮೇಲೆ ಸೌದಿ ಸೇನಾ ಪಡೆಗಳು ಎರಡು ವೈಮಾನಿಕ ದಾಳಿಗಳನ್ನು ನಡೆಸಿವೆ ಎಂದು ಹೌದಿಗಳೊಂದಿಗೆ ಗುರುತಿಸಿಕೊಂಡಿರುವ ‘ಅಲ್-ಮಸಿರಾ’ ವಾಹಿನಿ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor