ಕಲಬುರಗಿ : ವಿಶೇಷ ರೈಲುಗಳಿಗೆ ಕಲಬುರಗಿ ಜಂಕ್ಷನ್‌ನಲ್ಲಿ ಹೆಚ್ಚುವರಿ ವಾಣಿಜ್ಯ ನಿಲುಗಡೆಗಳನ್ನು ಒದಗಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಸೆಂಟ್ರಲ್ ರೈಲ್ವೆಯ ಸೋಲಾಪುರ ವಿಭಾಗ ಕ್ರಮ ಕೈಗೊಂಡಿದೆ.

ಈ ನಿಟ್ಟಿನಲ್ಲಿ ಮೂರು ವಿಶೇಷ ರೈಲುಗಳಿಗೆ ಕಲಬುರಗಿ ಜಂಕ್ಷನ್‌ನಲ್ಲಿ ಹೆಚ್ಚುವರಿ ನಿಲುಗಡೆ ನೀಡಲು ಸೆಂಟ್ರಲ್ ರೈಲ್ವೆ ಅನುಮೋದನೆ ನೀಡಿದೆ.

ರೈಲು ಸಂಖ್ಯೆ 04005 ಬೆಂಗಳೂರು ಕ್ಯಾಂಟ್–ನವದೆಹಲಿ ವಿಶೇಷ ರೈಲು ನವೆಂಬರ್ 24ರಂದು ಬೆಂಗಳೂರು ಕ್ಯಾಂಟ್‌ನಿಂದ ಹೊರಡಲಿದ್ದು, ಕಲಬುರಗಿಯಲ್ಲಿ ರಾತ್ರಿ 9.37ರಿಂದ 9.40ರವರೆಗೆ ನಿಲುಗಡೆ ಹೊಂದಲಿದೆ.

ರೈಲು ಸಂಖ್ಯೆ 07087 ಚರ್ಲಪಲ್ಲಿ–ಪ್ರತಾಪ್ ನಗರ ವಿಶೇಷ ರೈಲು ನವೆಂಬರ್ 21ರಂದು ಚರ್ಲಪಲ್ಲಿಯಿಂದ ಹೊರಡಲಿದ್ದು, ಕಲಬುರಗಿಯಲ್ಲಿ ರಾತ್ರಿ 9.40ರಿಂದ 9.43ರವರೆಗೆ ನಿಲುಗಡೆ ಹೊಂದಲಿದೆ.

ಅದೇ ರೀತಿ, ರೈಲು ಸಂಖ್ಯೆ 07088 ಪ್ರತಾಪ್ ನಗರ–ಚರ್ಲಪಲ್ಲಿ ವಿಶೇಷ ರೈಲು ನವೆಂಬರ್ 22ರಂದು ಪ್ರತಾಪ್ ನಗರದಿಂದ ಹೊರಡಲಿದ್ದು, ಕಲಬುರಗಿಯಲ್ಲಿ ಮಧ್ಯಾಹ್ನ 2.37ರಿಂದ 2.40ರವರೆಗೆ ನಿಲುಗಡೆ ಹೊಂದಲಿದೆ.

ಪ್ರಯಾಣಿಕರ ಅನುಕೂಲವನ್ನು ಹೆಚ್ಚಿಸುವುದು ಹಾಗೂ ತನ್ನ ವ್ಯಾಪ್ತಿಯಲ್ಲಿ ರೈಲು ಸಂಪರ್ಕವನ್ನು ಬಲಪಡಿಸುವುದು ಸೋಲಾಪುರ ವಿಭಾಗದ ಆದ್ಯತೆಯಾಗಿದೆ. ಪ್ರಯಾಣಿಕರ ಹಿತಾಸಕ್ತಿಗೆ ಅನುಗುಣವಾಗಿ ಉತ್ತಮ ರೈಲು ಸಂಪರ್ಕ ಮತ್ತು ಪ್ರಯಾಣ ಸೌಲಭ್ಯಗಳನ್ನು ಕಲ್ಪಿಸಲು ವಿಭಾಗ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಾಜಿದ್‌ ಅಲಿ/ವಾರ್ತಾಭಾರತಿ

ಕಲಬುರಗಿ ಜಿಲ್ಲಾ ವರದಿಗಾರರು

ಸಾಜಿದ್ ಅಲಿ ಅವರು 12 ವರ್ಷಗಳ ಪತ್ರಿಕೋದ್ಯಮ ಅನುಭವ ಹೊಂದಿದ್ದಾರೆ. ವಾರ್ತಾಭಾರತಿ ಮಂಗಳೂರು ಡೆಸ್ಕ್ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿರುವ ಇವರು, ಕಳೆದ ಏಳು ವರ್ಷಗಳಿಂದ ವಾರ್ತಾಭಾರತಿ ಡಿಜಿಟಲ್ ವೆಬ್‌ಸೈಟ್‌ನ ಕಲಬುರಗಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ವಾರ್ತಾಭಾರತಿ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಹಾಗೂ ಕಲ್ಯಾಣ ಕರ್ನಾಟಕ ವಿಭಾಗದ ಕೋಆರ್ಡಿನೇಟರ್ ಆಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ