×
Ad

ಕಲಬುರಗಿ ಜಿಲ್ಲಾ ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಕಾಂತ ಏರಿ ನೇಮಕ

Update: 2026-06-24 16:04 IST

ಕಲಬುರಗಿ : ಕಲಬುರಗಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆರೋಗ್ಯ ಇಲಾಖೆಯ ನಿರ್ದೇಶಕರಾದ ಚಂದ್ರಕಾಂತ ಏರಿ ಅವರನ್ನು ನೇಮಕ ಮಾಡಲಾಗಿದೆ.

ಈ ಹಿಂದೆ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಹೇಶ ಹೂಗಾರ ಅವರು ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಹುದ್ದೆಗೆ, ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ಅನುಮೋದನೆಯ ಮೇರೆಗೆ ಜಿಲ್ಲಾ ಅಧ್ಯಕ್ಷ ಬಸವರಾಜ ಬಳುಂಡಗಿ ಅವರು ಚಂದ್ರಕಾಂತ ಏರಿ ಅವರನ್ನು ಆಯ್ಕೆ ಮಾಡಿ ನೇಮಕ ಆದೇಶ ಹೊರಡಿಸಿದ್ದಾರೆ.

ಇತ್ತೀಚೆಗೆ ನಡೆದ ಜಿಲ್ಲಾ ಕಾರ್ಯಕಾರಿ ಸಭೆಯಲ್ಲಿ ಚಂದ್ರಕಾಂತ ಏರಿ ಅವರಿಗೆ ನೇಮಕಾತಿ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಖಜಾಂಚಿ ಶ್ರೀಮಂತ ಪಟ್ಟೇದಾರ, ರಾಜ್ಯ ಪರಿಷತ್ ಸದಸ್ಯ ಧರ್ಮರಾಯ ಜವಳಿ, ಪ್ರಮುಖರಾದ ಎಂ.ಬಿ. ಪಾಟೀಲ, ಸುರೇಶ್ ವಗ್ಗೆ, ಸಿದ್ದಲಿಂಗಯ್ಯ ಸ್ವಾಮಿ, ಸಂತೋಷ ಸಲಗರ, ದಾನಪ್ಪಗೌಡ ಪಾಟೀಲ, ಸಂಜು ಬಗಲಿ, ಅನೀಲ ಗುತ್ತೇದಾರ, ಕೃಷ್ಣಮಾಚಾರ, ಶಶಿಕಾಂತ ಹೋಳಕರ, ಸಂತೋಷ ಗಂಗೂ, ಸಂಗಣ್ಣ ಜಾಬ, ವಿಜಯಕುಮಾರ, ಮಹೇಶ ಬಸರಕೊಡ, ಭೀಮಾಶಂಕರ ಡಾಂಗೆ, ಸಂಜೀವರೆಡ್ಡಿ, ವೇದರಾಜ ವೇಸ್ಲಿ, ರಾಜಶೇಖರ ಕುರಿಕೋಟಾ, ರಾಚಣ್ಣ ಆನಂದ, ಸಿದ್ರಾಮ ಚಿಂಚೋಳಿ, ಹರೀಶ್ ಪಾಟೀಲ, ಗೋಪಾಲ ರಾಠೋಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News