×
Ad

Kalaburagi | ಪಿ.ಎಂ.ಶ್ರೀ ಶಾಲೆಯ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Update: 2026-06-29 18:48 IST

ಕಲಬುರಗಿ : ಪಿ.ಎಂ.ಶ್ರೀ ಯೋಜನೆಯಡಿ 2026-27 ನೇ ಶೈಕ್ಷಣಿಕ ವರ್ಷಕ್ಕೆ ಕಲಬುರಗಿ ಮದೀನಾ ಕಾಲೋನಿಯ ಪಿ.ಎಂ. ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಕರು-1 ಹುದ್ದೆ, ಯೋಗ ಮತ್ತು ಕರಾಟೆ ಶಿಕ್ಷಕರು-1 ಹುದ್ದೆ ಹಾಗೂ ಭದ್ರತಾ ಸಿಬ್ಬಂದಿ (Security Staff)-01 ಹುದ್ದೆಗಳ ಭರ್ತಿಗಾಗಿ ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಮದೀನಾ ಕಾಲೋನಿಯ ಪಿ.ಎಂ.ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್‍ನ ಉಪ ಪ್ರಾಂಶುಪಾಲರು ತಿಳಿಸಿದ್ದಾರೆ.

ಕಂಪ್ಯೂಟರ್ ಶಿಕ್ಷಕರ ಹುದ್ದೆಗೆ 25,000 ರೂ, ಯೋಗ ಮತ್ತು ಕರಾಟೆ ಶಿಕ್ಷಕರ ಹುದ್ದೆಗೆ 12,000 ರೂ. ಹಾಗೂ ಭದ್ರತಾ ಸಿಬ್ಬಂದಿಯ ಹುದ್ದೆಗೆ 10,000 ರೂ.ಗಳ ಮಾಸಿಕ ಗೌರವಧನ ನೀಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು 2026ರ ಜೂ.30ರ ಸಂಜೆ 4.30 ಗಂಟೆಯೊಳಗಾಗಿ ಕಲಬುರಗಿ ಮದೀನಾ ಕಾಲೋನಿಯ ಪಿ.ಎಂ. ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ತಮ್ಮ ಅರ್ಹತಾ ವಿದ್ಯಾರ್ಹತೆಯ ಮೂಲ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ವಿದ್ಯಾರ್ಹತೆ, ವಯೋಮಿತಿ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮದೀನಾ ಕಾಲೋನಿಯ ಪಿ.ಎಂ. ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಗೆ ಸಂಪರ್ಕಿಸಲು ಕೋರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News