Kalaburagi | ಮಹೇಶ್ ವಾರದ್ ಚಿತ್ರಗಳಲ್ಲಿ ಮಹಿಳಾ ಸಬಲೀಕರಣದ ಸಂದೇಶ: ರೆಹಮಾನ್ ಪಟೇಲ್

Update: 2026-08-18 18:39 IST

ಕಲಬುರಗಿ: ಯುವ ಕಲಾವಿದ ಮಹೇಶ್ ವಾರದ್ ಅವರ ಚಿತ್ರಗಳು ಮಹಿಳಾ ಸಬಲೀಕರಣದ ಮಹತ್ವವನ್ನು ಸಾರುತ್ತಿದ್ದು, ಕಲ್ಪನೆ ಹಾಗೂ ಫ್ಯಾಂಟಸಿ ಆಧಾರಿತ ವಿಶಿಷ್ಟ ಕಲಾ ಪ್ರಕಾರದ ಮೂಲಕ ಸಮಕಾಲೀನ ವಿಚಾರಗಳನ್ನು ಪ್ರತಿಬಿಂಬಿಸುತ್ತವೆ ಎಂದು ರಾಯಲ್ ಅಕಾಡೆಮಿ ಅಧ್ಯಕ್ಷ ರೆಹಮಾನ್ ಪಟೇಲ್ ಹೇಳಿದರು.

ನಗರದ ಆರ್ಯನ್ ಶಾಲಾ ಆವರಣದಲ್ಲಿರುವ ಧರಂಸಿಂಗ್ ಕಲಾ ಗ್ಯಾಲರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಮಹೇಶ್ ವಾರದ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಮಹೇಶ್ ವಾರದ್ ಅವರ ಚಿತ್ರಗಳಲ್ಲಿನ ಕಲ್ಪನಾತ್ಮಕ ಅಂಶಗಳು ವೀಕ್ಷಕರನ್ನು ಆಕರ್ಷಿಸುತ್ತವೆ. ಮಹಿಳಾ ಸಬಲೀಕರಣದಂತಹ ಪ್ರಮುಖ ಸಾಮಾಜಿಕ ವಿಚಾರಗಳನ್ನು ಚಿತ್ರಕಲೆಯ ಮೂಲಕ ಪರಿಣಾಮಕಾರಿಯಾಗಿ ಅಭಿವ್ಯಕ್ತಿಪಡಿಸಿರುವುದು ಶ್ಲಾಘನೀಯ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆರ್ಥಿಕ ನೆರವಿನೊಂದಿಗೆ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗಿತ್ತು. ಜೆಸ್ಕಾಂ ಅಧ್ಯಕ್ಷ ಪ್ರವೀಣಕುಮಾರ್ ಪಾಟೀಲ್ ಪ್ರದರ್ಶನ ಉದ್ಘಾಟಿಸಿ, ಯುವ ಕಲಾವಿದ ಸಮಕಾಲೀನ ವಿಚಾರಗಳನ್ನು ಚಿತ್ರಗಳ ಮೂಲಕ ಸೃಜನಾತ್ಮಕವಾಗಿ ಮೂಡಿಸಿರುವುದನ್ನು ಶ್ಲಾಘಿಸಿದರು.

ಮಾಜಿ ಮೇಯರ್ ಸಂಜಯ್ ಸಿಂಗ್ ಕೂಡ ಮಾತನಾಡಿ, ಕಲಾವಿದನ ಸೃಜನಶೀಲ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರು, ಕಲಾವಿದರು, ವಿದ್ಯಾರ್ಥಿಗಳು ಹಾಗೂ ಕಲಾಸಕ್ತರು ಭಾಗವಹಿಸಿದ್ದರು. ಪ್ರದರ್ಶನದಲ್ಲಿ ಮಹೇಶ್ ವಾರದ್ ಅವರ ವಿಭಿನ್ನ ಶೈಲಿ ಮತ್ತು ಸಮಕಾಲೀನ ಕಲಾ ಅಭಿವ್ಯಕ್ತಿಯನ್ನು ಬಿಂಬಿಸುವ ಚಿತ್ರಗಳು ಪ್ರದರ್ಶನಗೊಂಡಿದ್ದು, ಕಲ್ಪನಾಶಕ್ತಿಯ ವಿನೂತನ ಬಳಕೆ ಹಾಗೂ ಮಹಿಳಾ ಸಬಲೀಕರಣದ ಸಂದೇಶದಿಂದಾಗಿ ವೀಕ್ಷಕರ ಗಮನ ಸೆಳೆದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News