×
Ad

Kalaburagi | ಜಗತ್ತಿಗೆ ಬೆಳಕು ನೀಡಿದ ಸಾಹಿತ್ಯವೇ ಶರಣ ಸಾಹಿತ್ಯ: ಶಾಸಕ ಎಂ.ವೈ.ಪಾಟೀಲ್‌

Update: 2026-05-16 17:47 IST

ಕಲಬುರಗಿ: ಸಮಾಜದಲ್ಲಿರುವ ಅಜ್ಞಾನ ಮತ್ತು ಅಂಧಕಾರವನ್ನು ದೂರ ಮಾಡಿ ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ನೀಡುವ ಶ್ರೇಷ್ಠ ಸಾಹಿತ್ಯವೇ ವಚನ ಸಾಹಿತ್ಯ ಮತ್ತು ಶರಣ ಸಾಹಿತ್ಯ ಎಂದು ಅಫಜಲಪುರ ತಾಲೂಕಿನ ಶಾಸಕ ಎಂ.ವೈ.ಪಾಟೀಲ್‌ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಶರಣಗೌಡ ಕಿರಣಗಿ ಅವರ ಮೊಮ್ಮಕ್ಕಳ ನಾಮಕರಣ ಸಮಾರಂಭದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ವಚನಾಮೃತ” ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಮೌಲಿಕ ಸಂದೇಶಗಳನ್ನು ಒಳಗೊಂಡ ವಚನ ಸಾಹಿತ್ಯವನ್ನು ಜನರಿಗೆ ಹಂಚುವ ಕಾರ್ಯ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶರಣ ಬಂಧುಗಳಿಗೆ “ವಚನಾಮೃತ” ಪುಸ್ತಕವನ್ನು ವಿತರಿಸಲಾಯಿತು. ವಿಶ್ರಾಂತ ನಿರ್ದೇಶಕ ಕೆ.ಎಸ್. ಹಿರೇಮಠ ಸಾನಿಧ್ಯ ವಹಿಸಿದ್ದರೆ, ಎಂ.ಕೆ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸುರೇಶ ತಿಗಶೆಟ್ಟಿ, ಡಾ.ನಾಗೇಂದ್ರ ಮಸುತಿ, ಅರ್ಚನಾ ಬಸವರಾಜ ಪಾಟೀಲ, ಬಸವರಾಜ ಧೂಳಗುಂಡಿ, ಶಿವರಾಜ ಅಂಡಗಿ ಹಾಗೂ ಶರಣಗೌಡ ಕಿರಣಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಕಲ್ಯಾಣಪ್ಪ ಬಿರಾದಾರ ವಚನ ಪ್ರಾರ್ಥನೆ ನೆರವೇರಿಸಿದರು. ಶರಣಗೌಡ ಕಿರಣಗಿ ಸ್ವಾಗತಿಸಿದರು. ಬಸವರಾಜ ಧೂಳಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಬುಜಾ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News