Kalaburagi | ಶಿವರಾಜ ತಂಗಡಗಿ ಸಚಿವರಾಗಿ ನೇಮಕ: ಭೋವಿ ವಡ್ಡರ ಸಮಾಜದಿಂದ ವಿಜಯೋತ್ಸವ
Update: 2026-08-04 18:41 IST
ಕಲಬುರಗಿ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ರಾಜ್ಯ ಸಚಿವ ಸಂಪುಟದಲ್ಲಿ ಶಿವರಾಜ ತಂಗಡಗಿ ಅವರಿಗೆ ಸಚಿವ ಸ್ಥಾನ ದೊರೆತಿರುವುದನ್ನು ಸ್ವಾಗತಿಸಿ ಜಿಲ್ಲಾ ಭೋವಿ ವಡ್ಡರ ಸಮಾಜದ ವತಿಯಿಂದ ನಗರದ ಬ್ರಹ್ಮಪುರ ವಡ್ಡರಗಲ್ಲಿಯ ಭಗತ್‌ಸಿಂಗ್ ಚೌಕ ಬಡಾವಣೆಯಲ್ಲಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಮಾತನಾಡಿ, ಶಿವರಾಜ ತಂಗಡಗಿ ಅವರಿಗೆ ಸಚಿವ ಸ್ಥಾನ ದೊರೆತಿರುವುದು ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದೆ. ಸಚಿವರಾಗಿ ಅವರು ರಾಜ್ಯದ ಅಭಿವೃದ್ಧಿ ಹಾಗೂ ಸಮಾಜದ ಕಲ್ಯಾಣಕ್ಕಾಗಿ ಸಮರ್ಪಕವಾಗಿ ಕಾರ್ಯನಿರ್ವಹಿಸಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಭೀಮಾಶಂಕರ ಬಂಕೂರ್, ರಾಜು ಎಂ. ಪುರೆ, ತಿಮ್ಮಣ್ಣ ಜಾದವ್, ಬಸವರಾಜ್ ಇಂಚಲಗಿ, ರಾಘವೇಂದ್ರ ಲಸ್ಕರಿ, ಶಿವಕುಮಾರ ಎಂ. ಪುರೆ, ದೀಪಕ್, ಪಪ್ಪು, ನೀಲಕಂಠ, ಸಿದ್ದಮ್ಮ ಸೇರಿದಂತೆ ಭೋವಿ ವಡ್ಡರ ಸಮಾಜದ ಹಿರಿಯ ಮುಖಂಡರು, ಯುವಕರು ಭಾಗವಹಿಸಿದ್ದರು.