ಅಫಜಲಪುರ | ಬಚಾವತ್ ತೀರ್ಪಿನ 15 ಟಿಎಂಸಿ ನೀರಿಗಾಗಿ ಪಾದಯಾತ್ರೆ: ಸಂಘ-ಸಂಸ್ಥೆಗಳ ಬೆಂಬಲಕ್ಕೆ ಮನವಿ
ಅಫಜಲಪುರ: ಈ ಬಾರಿ ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಭವಿಷ್ಯದ ಜಲಕ್ಷಾಮ ತಡೆಗಟ್ಟಲು ಭೀಮಾ ನದಿಗೆ ಬಚಾವತ್ ತೀರ್ಪಿನಂತೆ 15 ಟಿಎಂಸಿ ನೀರು ಹರಿಸುವಂತೆ ಆಗ್ರಹಿಸಿ ಅ.14ರಂದು ತಾಲೂಕಿನ ಅಳ್ಳಗಿ ಕೆ. ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ರಮೇಶ ಪಾಟೀಲ ಹವಳಗಾ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮಾತನಾಡಿದ ಅವರು ಪಾದಯಾತ್ರೆಗೆ ಮಠಾಧೀಶರು ಚಾಲನೆ ನೀಡಲಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಭೀಮಾ ನದಿಗೆ ನೀರು ಹರಿಸುವ ಕುರಿತು ಸರಕಾರಕ್ಕೆ ಮನವಿ ಸಲ್ಲಿಸಿದರೂ ಸ್ಪಂದನೆ ಸಿಗದ ಕಾರಣ ಹೋರಾಟ ಅನಿವಾರ್ಯವಾಗಿದೆ ಎಂದರು.
ರೈತ ಮುಖಂಡ ಶ್ರೀಮಂತ ಬಿರಾದಾರ ಮಾತನಾಡಿ, ಪಾದಯಾತ್ರೆಯ ಯಶಸ್ಸಿಗೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಒಗ್ಗಟ್ಟಿನಿಂದ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಗುರು ಚಾಂದಕವಟೆ, ಭೀಮರಾವ ಗೌರ, ಶರಣಪ್ರಸಾದ ನೂಲಾ, ಶಾಂತು ಅಂಜುಟಗಿ, ರಮೇಶ ಪಾಟೀಲ, ಗುರು ಚಾಂದಕವಟೆ, ನಾಮದೇವ ಕಡಕೋಳ, ಲತೀಪ್ ಪಟೇಲ್, ಮುರಗೇಂದ್ರ ಮಸಳಿ, ಪ್ರಕಾಶ ಬನಸೋಡೆ, ಅಬ್ಬಾಸ ಅಲಿ ನದಾಫ್, ನೂರ ಅಹ್ಮದ್ ಭಾಗವಾನ್, ದತ್ತು ಬಂಕಲಗಿ, ಆನಂದ ಪಾಟೀಲ, ಅತುಲ್ ಪಾಟೀಲ, ಶಫಿಕ್ ಭಾಗವಾನ್, ಅಪ್ಪಾಸಾಬ ಪಾಣಿಗಾರ, ಶಿವಲಿಂಗ ಪಾಟೀಲ, ಧಾನು ನೂಲಾ, ಸಿದ್ದು ದೇವರನಾವದಗಿ, ಬಸು ಮಂಗಳೂರ ಸೇರಿ ಹಲವರಿದ್ದರು.