×
Ad

ಕಾಸರಗೋಡು : ಉದ್ಯಮಿ ಪಾಂಡ್ಯಾಲ್ ಶರೀಫ್ ನಿಧನ

Update: 2026-07-07 14:12 IST

ಕಾಸರಗೋಡು : ಖ್ಯಾತ ಆರ್ಕಿಟೆಕ್ಟ್ ಹಾಗೂ ಪಾಂಡ್ಯಾಲ್ ಶರೀಫ್ ಅಸೋಸಿಯೇಟ್ಸ್ ಮಾಲೀಕರಾದ ಪಾಂಡ್ಯಾಲ್ ಶರೀಫ್ ಅವರು ಮಂಗಳವಾರ (56) ನಿಧನರಾಗಿದ್ದಾರೆ.

ಅನಾರೋಗ್ಯದ ಕಾರಣದಿಂದಾಗಿ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಜುಲೈ 07  ಮುಂಜಾನೆ ಕೊನೆಯುಸಿರೆಳೆದರು. ಮೂಲತಃ ಕಾಸರಗೋಡು ಜಿಲ್ಲೆಯ ಮುಟ್ಟಂ ಶಿರಿಯಾ ನಿವಾಸಿಯಾಗಿದ್ದ ಇವರು ಮಂಗಳೂರಿನಲ್ಲಿ ನೆಲೆಸಿದ್ದರು.

ಮಂಗಳೂರು ಮತ್ತು ಕಾಸರಗೋಡಿನಲ್ಲಿ ತಲೆಯೆತ್ತಿ ನಿಂತಿರುವ ಹಲವಾರು ಪ್ರಮುಖ ಕಟ್ಟಡಗಳ ಆರ್ಕಿಟೆಕ್ಟ್ ಆಗಿ ಕಾರ್ಯನಿರ್ವಹಿಸಿದ್ದ ಪಾಂಡ್ಯಾಲ್ ಶರೀಫ್ ಅಸೋಸಿಯೇಟ್ಸ್ ಸಂಸ್ಥೆಯ ಮಾಲೀಕರು ಹಾಗೂ ಶಾಡೋ ಬಿಲ್ಡರ್ಸ್ ಸಂಸ್ಥೆಯ ನಿರ್ದೇಶಕರಾಗಿದ್ದರು. 

ತಲಪಾಡಿಯ 'ಲಿಟಲ್ ಏಕರ್ಸ್' ಯೋಜನೆ ಹಾಗೂ ಮ್ಯಾಕ್ ಇಂಡಿಯಾ ಗ್ರೂಪ್‌ನ ಹಲವು ಫ್ಲಾಟ್‌ಗಳು ಮತ್ತು ಕಮರ್ಷಿಯಲ್ ಹಬ್‌ಗಳ ವಿನ್ಯಾಸ ರೂಪಿಸಿದ್ದರು.

ಇವರು ಕೇರಳದ ನಿವೃತ್ತ ಡಿವೈಎಸ್‌ಪಿ ಪಿ.ಕೆ. ಮುಹಮ್ಮದ್ ಮತ್ತು ಆಯಿಷಾ ದಂಪತಿಯ ಪುತ್ರ.

ಮೃತರು ಪತ್ನಿ ಶಕೀಲಾ (ಪ್ರಮುಖ ಉದ್ಯಮಿ ಹಾಗೂ ಮ್ಯಾಕ್ ಗ್ರೂಪ್ ಸಂಸ್ಥೆಗಳ ಮಾಲೀಕರಾದ ಕುಂಬ್ಳೆ ಹಾಜಿ ಕೆ. ಮುಹಮ್ಮದ್ ಅರಬಿ ಅವರ ಪುತ್ರಿ). ಮಕ್ಕಳು: ಆಯಿಷಾ ರೂಮಾ (ಆರ್ಕಿಟೆಕ್ಟ್), ಫಾತಿಮಾ ರಿಯಾ (ಇಂಟೀರಿಯರ್ ಡಿಸೈನರ್). ಸಹೋದರಿಯರು: ತಾಹಿರಾ, ಸಕೀನಾ, ಹಸೀನಾ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News