Kasaragod : ಸ್ಕೂಟರ್‌ಗೆ ಟ್ಯಾಂಕರ್ ಢಿಕ್ಕಿ ; ಸವಾರನಿಗೆ ಗಾಯ

Update: 2026-08-20 09:42 IST

ಕಾಸರಗೋಡು: ಟ್ಯಾಂಕರ್ ಮತ್ತು ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸವಾರ ಗಂಭೀರ ಗಾಯಗೊಂಡ ಘಟನೆ ನಗರದ ಎಂ.ಜಿ. ರಸ್ತೆಯ ಹೈಪರ್ ಮಾರ್ಕೆಟ್ ಮುಂಭಾಗ ಬುಧವಾರ ಸಂಜೆ ನಡೆದಿದೆ.

ತಳಂಗರೆ ಬಾಂಗೋಡಿನ ಹನೀಫ್ (55) ಗಾಯಗೊಂಡವರು.

ಹೊಸ ಬಸ್ ನಿಲ್ದಾಣದಿಂದ ಹಳೆಯ ಬಸ್ ನಿಲ್ದಾಣದ ಕಡೆಗೆ ಹೋಗುತ್ತಿದ್ದ ಸ್ಕೂಟರ್‌ಗೆ ಟ್ಯಾಂಕರ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಢಿಕ್ಕಿಯ ರಭಸಕ್ಕೆ ಹನೀಫ್ ಅವರ ಕಾಲಿಗೆ ಗಂಭೀರ ಗಾಯವಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News